ಶ್ರೀರಂಗಂ ದೇವಸ್ಥಾನಕ್ಕೆ ಸ್ವಾಗತ

Sri Ranganatha Swamy Temple, Srirangam

timings

ವಿಶ್ವರೂಪ ಸೇವಾ

06:00 to 07:15

ಜನರಲ್ ದರ್ಶನ್ ಸಮಯ

09:00 to 12:00

13:15 to 18:00

18:45 to 21:00

* ಸಮಯ ಹಬ್ಬದ ದಿನಗಳಲ್ಲಿ ಬದಲಾಯಿಸಬಹುದು

timings

ಜಂಟಿ ಆಯುಕ್ತರು/ನಿರ್ವಹಣಾ ಅಧಿಕಾರಿ,

ಶ್ರೀ ರಂಗನಾಥ ಸ್ವಾಮಿ ದೇವಾಲಯ

ಶ್ರೀರಂಗಂ, ತಿರುಚಿರಪಲ್ಲಿ – 620 006

ತಮಿಳುನಾಡು, ಭಾರತ

ಫೋನ್ : +91 431 -2432246

ಫ್ಯಾಕ್ಸ್ : +91 431 -2436666

ಇಮೇಲ್ : srirangam@tnhrce.org

ಓಂ ನಮೋ ನಾರಾಯಣ

Donate generously for fullday Annadhanam scheme

Book rooms at Yatri Nivas: Ac Double Bed Rs.750/-

Book rooms at Yatri Nivas: Cottage Rs.1750/-

Book rooms at Yatri Nivas: Dormitory single bed Rs.100/-

Book rooms at Yatri Nivas: Non Ac Double Bed Rs.500/-

ಶ್ರೀರಂಗಂ ದೇವಸ್ಥಾನಕ್ಕೆ ಸ್ವಾಗತ

ಶ್ರೀರಂಗಂ ದೇಗುಲವು ಮಹಾವಿಷ್ಣು ದೇವರ ಎಂಟು ಉದ್ಭವ (ಸ್ವಯಂ ವ್ಯಕ್ತ) ಕ್ಷೇತ್ರಗಳಲ್ಲಿ ಒಂದು. ಇದನ್ನು ಮಹತ್ತರವಾದ 108 ಮಹಾವಿಷ್ಣು ದೇವಾಲಯಗಳ ಪೈಕಿ (ದಿವ್ಯದೇಗುಲಗಳು) ಮೊಟ್ಟಮೊದಲ, ಶ್ರೇಷ್ಠ ಮತ್ತು ಅತ್ಯಂತ ಮಹತ್ವದ ದೇವಾಲಯವೆಂದು ಪರಿಗಣಿಸಲಾಗಿದೆ. ಈ ಕ್ಷೇತ್ರವನ್ನು ತಿರುವರಂಗ ತಿರುಪತಿ, ಪೆರಿಯಕೋಯಿಲ್, ಭೂಲೋಕ ವೈಕುಂಠ, ಭೋಗಮಂಟಪ ಎಂಬ ಹೆಸರುಗಳಿಂಗಲೂ ಕರೆಯಲಾಗುತ್ತದೆ. ವೈಷ್ಣವ ಆಡುಭಾಷೆಯಲ್ಲಿ “ಕೋಯಿಲ್” ಎಂಬ ಪದವು ಈ ದೇವಾಲಯವನ್ನು ಮಾತ್ರವೇ ಸೂಚಿಸುತ್ತದೆ. ಈ ಕ್ಷೇತ್ರವು ವಿಸ್ತಾರವಾದುದಾಗಿದೆ. ದೇವಾಲಯ ಸಂಕೀರ್ಣವು 156 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಇದರಲ್ಲಿ 7 ಪ್ರಾಕಾರಗಳಿವೆ. ಗರ್ಭಗುಡಿಯ ಸುತ್ತ ನಿರ್ಮಿಸಲಾಗಿರುವ ಬೃಹತ್ತಾದ ಮತ್ತು ದಪ್ಪವಾದ ಗೋಡೆಗಳಿಂದ ನಿರ್ಮಿಸಲಾಗಿದೆ. ಎಲ್ಲ ಪ್ರಾಕಾರಗಳಲ್ಲೂ 21 ಅತ್ಯದ್ಭುತವಾದ ಗೋಪುರಗಳಿದ್ದು, ಸಂದರ್ಶಿಸುವ ಯಾವುದೇ ವ್ಯಕ್ತಿಗೆ ವಿಶಿಷ್ಟವಾದ ನೋಟವನ್ನು ಒದಗಿಸುತ್ತವೆ. ಕಾವೇರಿ ಮತ್ತು ಕೊಲೆರೂನ್ ಅವಳಿ ನದಿಗಳು ರಚಿಸಿರುವ ಪರ್ಯಾಯ ದ್ವೀಪವೇ ಈ ಶ್ರೀರಂಗನ ನೆಲೆ.