ಶ್ರೀರಂಗಂ ದೇವಸ್ಥಾನಕ್ಕೆ ಸ್ವಾಗತ

Sri Ranganatha Swamy Temple, Srirangam

  • ಪ್ರವಾಸ

ಪ್ರವಾಸ

ಯಾತ್ರಿಕರಿಗೆ ಮಾಹಿತಿ ಪುಟ

  • ತಿರುಚಿರಪಳ್ಳಿಗೆ ರಸ್ತೆ, ರೈಲು ಹಾಗೂ ವಿಮಾನಯಾನ ಸಂಪರ್ಕವಿದೆ
  • ತಿರುಚಿರಪಳ್ಳಿ ರೈಲ್ವೇ ಜಂಕ್ಷನ್ನಿನಿಂದ ಶ್ರೀರಂಗಂ 9 ಕಿಮೀ ದೂರದಲ್ಲಿದೆ
  • ಶ್ರೀರಂಗಂ ದೇವಾಲಯವು ತಿರುಚಿರಪಳ್ಳಿ ವಿಮಾನ ನಿಲ್ದಾಣದಿಂದ 15 ಕಿಮೀ ದೂರದಲ್ಲಿದೆ
  • ಶ್ರೀರಂಗಂ ದೇವಾಲಯವು ಶ್ರೀರಂಗಂ ರೈಲು ನಿಲ್ದಾಣದಿಂದ 0.5 ಕಿಮೀ ದೂರದಲ್ಲಿದೆ.
  • ತಿರುಚಿರಪಳ್ಳಿ ರೈಲು ನಿಲ್ದಾಣ/ಬಸ್ ನಿಲ್ದಾಣ/ ವಿಮಾನ ನಿಲ್ದಾಣದಿಂದ “ಕಾರು ಬಾಡಿಗೆ” ಸೌಲಭ್ಯವು ದೊರೆಯುತ್ತದೆ.
  • ತಿರುಚಿರಪಳ್ಳಿ ರೈಲು ನಿಲ್ದಾಣ/ಸೆಂಟ್ರಲ್ ಬಸ್ ಸ್ಟಾಪ್/ಚಾತಿರಂ ಬಸ್ ನಿಲ್ದಾಣದಿಂದ 24/7 ಬಸ್ ಸೌಲಭ್ಯವಿದೆ.

ತಿರುಚಿರಪಳ್ಳಿಯ ಕುರಿತು

ಚೋಳರ ದೊರೆಯಾಗಿದ್ದ ನಾಗರಾಜ ಚೋಳನ ಆಸ್ಥಾನವಾಗಿದ್ದ ತಿರುಚಿರಪಳ್ಳಿಯು ಹಲವಾರು ಐತಿಹಾಸಿಕ ದೇವಾಲಯಗಳು, ಸ್ಮಾರಕಗಳು, ಚರ್ಚುಗಳು ಮತ್ತು ಮಸೀದಿಗಳ ನೆಲೆಯೆನಿಸಿದೆ. ಉರಯ್ಯೂರು(ಒರಯ್ಯೂರು ಎಂದು ಕೂಡ ಹೇಳುತ್ತಾರೆ) ಹಳೆಯ ತಿರುಚ್ಚಿ ನಗರವಾಗಿದ್ದು ಸುದೀರ್ಘ ಇತಿಹಾಸವನ್ನು ಹೊಂದಿದೆ. 2,500 ವರ್ಷಗಳ ಅರಿತಿರುವ ಇತಿಹಾಸವನ್ನು ಹೊಂದಿರುವ ಈ ನಗರವು ಚೋಳ ವಂಶದ ಆಡಳಿತದ ಆರಂಭಿಕ ಹಂತಗಳಲ್ಲಿ ಆ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಉರಯ್ಯೂರಿನಿಂದ 10 ಮೈಲಿ ದೂರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕರಿಕಾಲ ಚೋಳನಿಂದ ನಿರ್ಮಾಣಗೊಂಡಿರುವ ಅಣೆಕಟ್ಟಿದೆ. ಈ ನಗರವು ನಂತರವೂ ಚೋಳ ವಂಶದ ಹಾಗೂ ನಾಯಕರ, ಅಂತೆಯೇ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಸಮಯದಲ್ಲಿ ಮಹತ್ವ ಪಡೆದಿತ್ತು. ಮಧುರೈ ನಾಯಕರು ಹಲವು ಬಾರಿ ತಮ್ಮ ರಾಜಧಾನಿಯನ್ನು ಮಧುರೈಗೆ ತಿರುಚಿರಪಳ್ಳಿಗೂ ಬದಲಾಯಿಸಿದ್ದರು. ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯು ತಿರುಚಿರಪಳ್ಳಿಯನ್ನು ಕೈವಶ ಮಾಡಿಕೊಂಡಿದ್ದು ಭಾರತದಲ್ಲಿ ಬ್ರಿಟಿಷ್ ಆಡಳಿತದ ಅಡಿಗಲ್ಲನ್ನು ಹಾಕುವಲ್ಲಿ ಮಹತ್ವದ ಪಾತ್ರವಹಿಸಿತ್ತು.

ತಿರುಚಿರಪಳ್ಳಿಯಲ್ಲಿನ ಒಂದು ಪ್ರಸಿದ್ಧವಾದ ಹೆಗ್ಗುರುತು ಎಂದರೆ ಇಲ್ಲಿನ ಶಿಲಾ ದುರ್ಗ. ನಗರದ ಸಮತಟ್ಟಾದ ಸ್ಥಳದಲ್ಲಿ 83 ಮೀಟರುಗಳ ಎತ್ತರದ ಏಕೈಕ ಶಿಲೆಯಿಂದ ನಿರ್ಮಾಣಗೊಂಡಿರುವ ಕಲ್ಲಿನ ಕೋಟೆಯಿದು. ಇದೇ ಕಾರಣಕ್ಕಾಗಿಯೇ ಈ ನಗರವನ್ನು ಕಲ್ಲಿನ ನಗರವೆಂದೂ ಕರೆಯುತ್ತಾರೆ. ಈ ಶಿಲಾಬಂಡೆಯ ಮೇಲ್ಭಾಗದಲ್ಲಿ ಉಚ್ಚಿ ಪಿಳ್ಳಯರ್ ಕೋಯಿಲ್, ಅಂದರೆ ಶ್ರೀ ವಿನಾಯಕ (ಗಣೇಶ) ದೇವರ ದೇವಾಲಯವಿದೆ. ಈ ಸ್ಥಳದಿಂದ ನೀವು ತಿರುಚಿರಪಳ್ಳಿಯ ರಮ್ಯ ನೋಟವನ್ನು ಸವಿಯಬಹುದು. ನಾಯಕರು ಕೆಲಕಾಲ ಈ ದೇವಾಲಯವನ್ನು ಸೇನಾನೆಲೆಯಾಗಿ ಕೂಡ ಬಳಕೆಮಾಡುತ್ತಿದ್ದರು. ಬಂಡೆಯ ದಕ್ಷಿಣದಬದಿಯಲ್ಲಿ ಪಲ್ಲವರ ಕಾಲದ ಹಲವಾರು ಸುಂದರ ಗುಹಾಂತರ ದೇವಾಲಯಗಳಿವೆ. ಬಂಡೆಯ ಪೂರ್ವಭಾಗದಲ್ಲಿ ಶಕ್ತಿಗಣೇಶನೆನಿಸಿರುವ ಇಲ್ಲಿನ ಮುಖ್ಯ ದೇವತೆಯೂ ಆಗಿರುವ ಶ್ರೀ ನಂದ್ರುದಯನ್ ವಿನಾಯಕಸ್ವಾಮಿಯ ದೇವಾಲಯವಿದೆ. ಬೃಹತ್ ಗಾತ್ರದ ಗಣೇಶ ವಿಗ್ರಹವನ್ನು ಮತ್ತು ಬೇರೆ ದೇವಾನುದೇವತೆಗಳ ಅಪರೂಪದ ವಿಗ್ರಹಗಳನ್ನೂ ಈ ದೇವಸ್ಥಾನದಲ್ಲಿ ಕಾಣಬಹುದು. ಪ್ರತಿ ವರ್ಷ ಗಣೇಶ ಚತುರ್ಥಿಯಂದು ಈ ದೇವಾಲಯದ ಜಾತ್ರೆಯು ನಡೆಯುತ್ತದೆ ಮತ್ತು ಹಲವಾರು ಪ್ರಸಿದ್ಧ ಕರ್ನಾಟಕ ಸಂಗೀತ ಕಲಾವಿದರು ಹಾಗೂ ದಿಗ್ಗಜರು ಸುಮಾರು 70ಕ್ಕಿಂತಲೂ ಹೆಚ್ಚು ವರ್ಷಗಳಿಂದಲೂ ಇಲ್ಲಿ ಸಂಗೀತ ಕಚೇರಿ ನಡೆಸುತ್ತ ಬಂದಿದ್ದಾರೆ. ಶಿಲಾದೇವಾಲಯದ ಸುತ್ತ ಛತ್ರಂ ಎಂದು ಕರೆಯಲಾಗುವ ಜನದಟ್ಟಣೆಯಿರುವ ವಾಣಿಜ್ಯ ಸ್ಥಳಗಳಿದ್ದು ಬಟ್ಟೆಬರೆಗಳ ಮಾರಾಟಕ್ಕೆ ಪ್ರಸಿದ್ಧಿ ಪಡೆದಿದೆ.

thar1
thar2