ಶ್ರೀರಂಗಂ ದೇವಸ್ಥಾನಕ್ಕೆ ಸ್ವಾಗತ

Sri Ranganatha Swamy Temple, Srirangam

  • ಹಬ್ಬಗಳು

ಜ್ಯೇಷ್ಠಾಭೀಷೇಕ

ಅಶುದ್ಧತೆಗಳ ಶುದ್ಧೀಕರಣಕ್ಕಾಗಿ ತಮಿಳು ಮಾಸವಾದ ಆನಿಯಲ್ಲಿ (ಜೂನ್-ಜುಲೈ ಅವಧಿ) ಇದನ್ನು ಆಚರಿಸಲಾಗುತ್ತದೆ. ಈ ದಿನ ಗರ್ಭಗುಡಿಯನ್ನು ಸ್ವಚ್ಛಗೊಳಿಸಲಾಗುತ್ತದೆ, ವಿಶೇಷವಾಗಿ ಪೆರಿಯ ಪೆರುಮಾಳ್‌ ಮೇಲೆ ದೇವಾಲಯದಲ್ಲಿ ತಯಾರಿಸುವ ಗಿಡಮೂಲಿಕೆ ತೈಲವನ್ನು ಹಚ್ಚಲಾಗುತ್ತದೆ. ನಾಂಪೆರುಮಾಳ್ ಹಾಗೂ ದೇವಿಯಂದಿರ ಚಿನ್ನದ ಕವಚಗಳನ್ನು (ತಮಿಳಿನಲ್ಲಿ ಆಂಗಿಲ್) ಸ್ವರ್ಣಕಾರರು ಚೊಕ್ಕಟಗೊಳಿಸುತ್ತಾರೆ. ಸ್ವರ್ಣ ಹಾಗೂ ರಜತ ಪಾತ್ರೆಗಳಲ್ಲಿ ಕಾವೇರಿಯ ಪವಿತ್ರ ತೀರ್ಥವನ್ನು ಒಯ್ಯಲು ಅರ್ಚಕರು ಹಾಗೂ ಭಕ್ತರು ಕಾವೇರಿ ನದಿಯನ್ನು ಭೇಟಿ ಮಾಡುತ್ತಾರೆ. ಸ್ವರ್ಣ ಪಾತ್ರೆಯನ್ನು ಆನೆಯ ಮೂಲಕ ತರಲಾಗುತ್ತದೆ. ಚಿನ್ನದ ಪಾತ್ರೆಯನ್ನು 1734ರಲ್ಲಿ ವಿಜಯನಗರ ಚೊಕ್ಕನಾಯಕರು ಅರ್ಪಿಸಿದ್ದರು. ಅದೇ ಸಮಯದಲ್ಲಿ ಇದನ್ನು ಕದಿಯಲಾಗಿತ್ತಾದರೂ ದೈವಕೃಪೆಯಿಂದ ಅದನ್ನು ಹಿಂದಕ್ಕೆ ಪಡೆಯುವುದು ಸಾಧ್ಯವಾಯಿತು. ಈ ಚಿನ್ನದ ಕೊಡದ ಮೇಲಿನ ಶಾಸನವು ತೆಲುಗು ಭಾಷೆಯಲ್ಲಿದೆ. ಅನೇಕ ಬೆಳ್ಳಿ ಕೊಡಗಳಲ್ಲಿ ಕಾವೇರಿ ನದಿ ನೀರನ್ನು ತುಂಬಿಕೊಂಡು ದೇವಾಲಯಕ್ಕೆ ತರಲಾಗುತ್ತದೆ. ಪವಿತ್ರ ತೀರ್ಥವನ್ನು ದೇವಾಲಯಕ್ಕೆ ಒಯ್ಯುವಾಗ ವೇದಮಂತ್ರಗಳನ್ನು ಪಠಿಸಲಾಗುತ್ತದೆ. ನಂತರ ಕೊಡಗಳನ್ನು ಪಶ್ಚಿಮ ಭಾಗದಲ್ಲಿಟ್ಟು, ತಿರುವೆನ್ನೈಯ ಪ್ರಹರಂನಲ್ಲಿ ಸ್ಥಾಪಿಸಲಾಗುತ್ತದೆ. ದೇವರ ಚಿನ್ನದ ಕವಚಗಳನ್ನು ತೆಗೆದು ಜೀರ್‌ ಸ್ವಾಮಿಜಿ ಹಾಗೂ ವಧುಲ ದೇಸಿಕರ್ ಸ್ವಾಮಿಯವರಿಗೆ ನೀಡಲಾಗುತ್ತದೆ. ನಂತರ ಸ್ವರ್ಣಕವಚಗಳನ್ನು ಅಕ್ಕಸಾಲಿಗರು ಚೊಕ್ಕಟಗೊಳಿಸುತ್ತಾರೆ. ಸಾರ್ವಜನಿಕ ಪೂಜಾರಾಧನೆಯ ನಂತರ ಸಂಜೆಯ ಸಮಯದಲ್ಲಿ ಸ್ವರ್ಣಕವಚಗಳನ್ನು ಪುನಃ ಸೇರಿಸಲಾಗುತ್ತದೆ.

1

ಪವಿತ್ರೋತ್ಸವ

ಇದನ್ನು ತಮಿಳು ಮಾಸವಾದ ಆನಿಯಲ್ಲಿ (ಅಗಸ್ಟ್‌-ಸೆಪ್ಟೆಂಬರ್ ಅವಧಿ) ಆಚರಿಸಲಾಗುತ್ತದೆ, ದೇವರು ಧರಿಸಿರುವ ಪವಿತ್ರದಾರಕ್ಕೆ ಇದು ಸಮರ್ಪಿತವಾಗಿದೆ ಮತ್ತು ದೈನಂದಿನ ಪೂಜೆಯ ಲೋಪದೋಷಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಇದನ್ನು ಮಾಡಲಾಗುತ್ತದೆ. ಮೊದಲ ದಿನ 365 ಸಲದ ತಿರುವಾರಾಧನೆಯನ್ನು ಉತ್ಸವಕ್ಕಾಗಿ ಯಾಗಶಾಲೆಯಲ್ಲಿ ನಡೆಸಲಾಗುತ್ತದೆ, ಮತ್ತು ಎರಡನೇ ದಿನ 1008 ಸಲ ಗರ್ಭಗುಡಿಯಲ್ಲಿ ಎಲ್ಲ ದೇವಮೂರ್ತಿಗಳಿಗೂ ನಡೆಸಲಾಗುತ್ತದೆ. ಬೂಕಾಂಡಿ ಸೇವೆ (ಅಂಗೋಬಂಗ ಸೇವೆ) ಎಂದು ಕರೆಯುವ ಪವಿತ್ರ ಧಾರವನ್ನು ದೇವರಮೂರ್ತಿಯನ್ನು ಸಂಪೂರ್ಣವಾಗಿ ಮುಚ್ಚುವ ರೀತಿಯಲ್ಲಿ ತೊಡಿಸಲಾಗುತ್ತದೆ. ಈ ಉತ್ಸವವನ್ನು ದೈನಂದಿನ ಪೂಜಾಕೈಂಕರ್ಯದಲ್ಲಿ ಉಂಟಾಗುವ ಯಾವುದೇ ಲೋಪದೋಷಗಳನ್ನು ತೊಡೆದುಹಾಕುವುದಕ್ಕಾಗಿ ನಡೆಸಲಾಗುತ್ತದೆ. ಈ ಉತ್ಸವವನ್ನು ಚೆರಣೈ ವೆಂಡ್ರನ್ ಮಂಟಪ ಅಥವಾ ಪವಿತ್ರ ಮಂಟಪದಲ್ಲಿ ನಡೆಸಲಾಗುತ್ತದೆ. ಈ ಮಂಟಪದ ನಿರ್ಮಾತೃ ಜಡವರ್ಮ ಸುಂದರಪಾಂಡಿಯನ್. ದೇವ ಹಾಗೂ ದೇವಿಯ ಮೂರ್ತಿಯು ಮುಸಲ್ಮಾನರ ದಾಳಿಯ 60 ವರ್ಷಗಳ ನಂತರ 1371ರಲ್ಲಿ ಈ ಮಂಟಪಕ್ಕೆ ಪ್ರವೇಶಿಸಿದವು. ಗರ್ಭಗುಡಿಯ ದೇವಿಯರನ್ನು ಮೇಲಿನ ಮಂಟಪದಲ್ಲಿ ಸ್ಥಾಪಿಸಲಾಯಿತು. ಈ ಉತ್ಸವವನ್ನು ಮೊದಲು ಆರಂಭಿಸಿದ್ದು ಬ್ರಹ್ಮದೇವರು ಎನ್ನುವ ಪ್ರತೀತಿಯಿದೆ. ಈ ಉತ್ಸವದಿಂದಾಗಿಯೇ ಎಲ್ಲ ಮೂರ್ತಿಗಳಿಗೂ ಪವಿತ್ರವಾದ ಹತ್ತಿನೂಲಿನ ದಾರವನ್ನು (ಪವಿತ್ರಂ) ತೊಡಿಸುವ ರೂಢಿಯು ಪ್ರಾರಂಭಗೊಂಡಿತು.

ಶ್ರೀ ಜಯಂತಿ

ಶ್ರೀ ಕೃಷ್ಣನ ಜನ್ಮದಿನವನ್ನು ರಂಗನಾಥಸ್ವಾಮಿ ದೇವಾಲಯದ ಆವರಣದ ಒಳಗಡೆಯಿರುವ ಎಲ್ಲ ಶ್ರೀಕೃಷ್ಣ ದೇವಾಲಯಗಳಲ್ಲಿಯೂ ಆಚರಿಸಲಾಗುತ್ತದೆ. ವಿಶೇಷವಾಗಿ ಕಿಲಿ ಮಂಟಪದ ಕೃಷ್ಣ ದೇವಾಲಯ (ಇಲ್ಲಿ ದೇವರ ಮೂರ್ತಿಯನ್ನು ತಂದೆಯಾದ ನಂದಗೋಪ ಹಾಗೂ ಯಶೋಧೆಯ ಹಾಗೂ ರೋಹಿಣಿಯ ಮೂರ್ತಿಗಳ ಜೊತೆ ಸ್ಥಾಪಿಸಲಾಗುತ್ತದೆ. ಪವಿತ್ರ ತೀರ್ಥವನ್ನು ಅಭಿಷೇಚಿಸಲಾಗುತ್ತದೆ. ಚಿತ್ರಬೀದಿಗಳಲ್ಲಿ ಶ್ರೀ ಕೃಷ್ಣನ ಹಾಗೂ ನಾಂಪೆರುಮಾಳ್ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ. ಈ ಉತ್ಸವದಿಂದಾಗಿ ನಾಂಪೆರುಮಾಳ್ ಸ್ವಾಮಿ ಶ್ರೀಪಂಡರಂವನ್ನು ಸಂದರ್ಶಿಸುತ್ತಾನೆ. ಅಲ್ಲಿ ನಾಂಪೆರುಮಾಳ್‌‌ ಸ್ವಾಮಿಗೆ ಅಭಿಷೇಕವನ್ನು ಮಾಡಲಾಗುತ್ತದೆ.

ಊಂಜಲ್

ತಮಿಳು ಮಾಸವಾದ ಐಪಾಸಿಯಲ್ಲಿ (ಆಕ್ಟೋಬರ್ –ಡಿಸೆಂಬರ್ ನಡುವೆ) ನಡೆಸುವ ಈ ಆಚರಣೆಯು ಉಯ್ಯಾಲೆಯಲ್ಲಿನ ಲೋಪದೋಷಗಳನ್ನು ನಿವಾರಿಸುವುದು. ಇದನ್ನು ಡೋಲೋತ್ಸವಂ ಎಂದು ಕೂಡ ಕರೆಯುತ್ತಾರೆ. ಈ ಉತ್ಸವವನ್ನು 1489ರಲ್ಲಿ ಕಂಡದೈ ರಾಮಾನುಜರು ಆರಂಭಿಸಿದರು. ಈಗ ಇದನ್ನು 9 ದಿನಗಳ ಉತ್ಸವವಾಗಿ ಆಚರಿಸುತ್ತಾರೆ. ಮೊದಲ ಹಾಗೂ 7 ನೇ ದಿನ ದೇವರ ಮೂರ್ತಿಯನ್ನು ದೇವಿಯ ಮೂರ್ತಿಯೊಂದಿಗೆ ಹಾಗೂ ಉಳಿದೆಲ್ಲ ದಿನಗಳಂದು ದೇವರ ಮೂರ್ತಿಯೊಂದನ್ನೇ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ದೇವರ ಮೂರ್ತಿಯ ಸನ್ನಿಧಿಯಲ್ಲಿ ಅರಯಾರ್‌ ರಚನೆಗಳನ್ನು ಪಠಿಸುತ್ತಾರೆ. ಕೊನೆಯ ದಿನ ದೇವರನ್ನು ಚಂದ್ರ ಪುಷ್ಕರ್ಣಿಗೆ ಕೊಂಡೊಯ್ದು ತೀರ್ಥವಾರಿಯನ್ನು ನಡೆಸಲಾಗುತ್ತದೆ. ನಂತರ ನಾಂಪೆರುಮಾಳ್ ಊಂಜಲ್‌ ಮಂಟಪಕ್ಕೆ ಬಂದು ಅಲ್ಲಿ ಅಭಿಷೇಕವನ್ನು ಸ್ವೀಕರಿಸುವರು. ನಂತರ ರಾತ್ರಿಯಲ್ಲಿ ದೇವರು ಗರ್ಭಗುಡಿಗೆ ಹಿಂತಿರುಗುವರು. ಈ ಊಂಜಲ್ ಉತ್ಸವವು ಐಪಾಸಿ ಕೃಷ್ಣಪಕ್ಷದ ಏಕಾದಶಿಗಿಂತ ಎಂಟು ದಿನ ಮೊದಲು ಆರಂಭವಾಗಿ ಏಕಾದಶಿಯಂದು ಮುಕ್ತಾಯಗೊಳ್ಳುವುದು.

ಕೈಸಿಗ ಏಕಾದಶಿ

ಕೈಸಿಗ ಏಕಾದಶಿಯ ಉತ್ಸವವನ್ನು ಎಕಾದಶಿಗಿಂತ ಮೂವತ್ತು ದಿನಗಳ ಮೊದಲು ಆಚರಿಸಲಾಗುತ್ತದೆ. ದೇವರು ಸಂತಾನ ಮಂಟಪಕ್ಕೆ ಬರುತ್ತಾರೆ, ಮತ್ತು ಅಲ್ಲಿ ಅಭಿಷೇಕವನ್ನು ಮಾಡಲಾಗುತ್ತದೆ. ನಂತರ ಸಂಜೆಯ ಸಮಯದಲ್ಲಿ ದೇವರು ಗರ್ಭಗುಡಿ ಪ್ರವೇಶಿಸುತ್ತಾರೆ. ರಾತ್ರಿಯ ಸಮಯದಲ್ಲಿ ದೇವರು ಅರ್ಜುನ ಮಂಟಪಕ್ಕೆ ಬರುತ್ತಾರೆ. ಇಲ್ಲಿ 365 ಪೂಜೆಗಳನ್ನು ಮಾಡಲಾಗುತ್ತದೆ. 365 ವಸ್ತ್ರಗಳನ್ನು ದೇವರಿಗೆ ತೊಡಿಸಲಾಗುತ್ತದೆ. ಮಧ್ಯರಾತ್ರಿಯ ವೇಳೆಯಲ್ಲಿ ಕೈಸಿಕ ಪುರಾಣಂ ಪಠಿಸಲಾಗುತ್ತದೆ. ಗರ್ಭಗುಡಿಗೆ ಹಿಂತಿರುಗುವ ವೇಳೆಯಲ್ಲಿ ಪಚ್ಚ ಕರ್ಪೂರವನ್ನು (ಶುದ್ಧಗೊಳಿಸಿದ ಕರ್ಪೂರ) ಸಿಂಪಡಿಸಲಾಗುವುದು ಮತ್ತು ನಂತರ ಗರ್ಭಗುಡಿಗೆ ದೇವರ ಮೂರ್ತಿಯು ಪ್ರವೇಶಿಸುವುದು.

ಏಕಾದಶಿ

ಇದು ತಮಿಳು ಮಾಸ ಮಾರ್ಗಳಿಯಲ್ಲಿ (ಡಿಸೆಂಬರ್-ಜನವರಿ) ಇಪ್ಪತ್ತೊಂದು ದಿನಗಳ ಕಾಲ ಆಚರಿಸುವ ಅತ್ಯಂತ ಮಹತ್ವದ ಉತ್ಸವವಾಗಿದೆ. ಇದನ್ನು ಪಗಲ್ ಪಾತು ಮತ್ತು ರಾ ಪಾತು ಎನ್ನುವ ಎರಡು ಹತ್ತು ದಿನಗಳ ಭಾಗಗಳಾಗಿ ವಿಂಗಡಿಸಲಾಗಿದ್ದು ಎಲ್ಲ ಸಂಭ್ರಮ ಹಾಗೂ ಸಡಗರಗಳ ಜೊತೆಯಲ್ಲಿ ಆಚರಿಸಲಾಗುತ್ತದೆ. ಏಕಾದಶಿಯ ದಿನದಂದು ಆಭರಣಗಳಿಂದ ಅಲಂಕೃತನಾಗಿರುವ ಶ್ರೀ ರಂಗನಾಥ ಸ್ವಾಮಿಯ ಮೆರವಣಿಗೆಯನ್ನು ಪರಮಪಾದ ವಾಸಲ್ ನಿಂದ ಮುಂದುವರಿಸಿ ಸಡಗರ ಸಂಭ್ರಮದಿಂದ ಭಾರತದ ಹಾಗೂ ದೇಶವಿದೇಶಗಳ ಲಕ್ಷಗಟ್ಟಲೆ ಜನರು ಸೇರಿರುವ ಸಾವಿರ ಕಂಬಗಳ ತಿರುಮಾಮಣಿ ಮಂಟಪದ ಮೂಲಕ ಒಯ್ಯಲಾಗುತ್ತದೆ. ಈ ಸನ್ನಿವೇಶವು ದೇವಾಲಯದಲ್ಲಿ ನಡೆಸಲಾಗುವ ಎಲ್ಲ ಉತ್ಸವಗಳಲ್ಲಿ ಅತ್ಯಂತ ಮುಖ್ಯವಾದುದಾಗಿದೆ; ಶ್ರೀರಂಗನಾಥ ಸ್ವಾಮಿಯನ್ನು ಮಹಾರಾಜ ಎನ್ನುವ ರೀತಿಯಲ್ಲಿ ಭಾವಿಸಲಾಗುತ್ತದೆ ಹಾಗೂ ಶ್ರೀ ರಂಗರಾಯ ಎಂದು ಹೆಸರಿಸಲಾಗುತ್ತದೆ. ಈ ಭವ್ಯವಾದ ಸಭಾಮಂಟಪದಲ್ಲಿ ಹಾಗೂ ವಿಶೇಷವಾಗಿ ನಿರ್ಮಿಸಿರುವ ಹಾಗೂ ಅಲಂಕರಿಸಿರುವ ಪೆಂಡಾಲಿನಲ್ಲಿ ಶ್ರೀರಂಗನಾಥ ಸ್ವಾಮಿಯ ದಿವ್ಯವಾದ ದರ್ಬಾರು ನಡೆಯುತ್ತದೆ ಹಾಗೂ ದಿನವಿಡೀ ನಳಯಿರ ದಿವ್ಯಪ್ರಬಂಧಂ ಪಠಿಸಲಾಗುತ್ತದೆ ಹಾಗೂ ದೇವರ ಮೂರ್ತಿಯು ರಾತ್ರಿಯ ಸಮಯದಲ್ಲಿ ದೇವಾಲಯಕ್ಕೆ ಹಿಂತಿರುಗುತ್ತದೆ. ಭಕ್ತಜನರು ಬೆಳಗಿನಿಂದ ಮಧ್ಯ ರಾತ್ರಿಯವರೆಗೂ ಸತತವಾಗಿ ಬರುತ್ತಲೇ ಇರುತ್ತಾರೆ. ಭಕ್ತರು ದಿನವಿಡೀ ಉಪವಾಸವಿದ್ದು, ತಂಡತಂಡವಾಗಿ ಭಜನೆಯನ್ನು ಅವಿಶ್ರಾಂತವಾಗಿ ಕೈಗೊಳ್ಳುತ್ತಾರೆ ಹಾಗೂ ತಾಳಕ್ಕೆ ತಕ್ಕಂತೆ ಹಾಡುತ್ತ, ಕುಣಿಯುತ್ತ ದೇವರ ನಾಮವನ್ನು ಕೊಂಡಾಡುತ್ತ ಇಡೀ ರಾತ್ರಿ ಜಾಗರಣೆ ಮಾಡುತ್ತಾರೆ. ನಿಜವಾಗಿಯೂ ಇದು ಅತ್ಯಂತ ದೈವಿಕ ಅನುಭೂತಿಯನ್ನು ನೀಡುವುದು ಹಾಗೂ ಭೂವೈಕುಂಠವೋ ಎನ್ನುವಂತೆ ಭಾಸವಾಗುವುದು.ಇದು ತಮಿಳು ಮಾಸ ಮಾರ್ಗಳಿಯಲ್ಲಿ (ಡಿಸೆಂಬರ್-ಜನವರಿ) ಇಪ್ಪತ್ತೊಂದು ದಿನಗಳ ಕಾಲ ಆಚರಿಸುವ ಅತ್ಯಂತ ಮಹತ್ವದ ಉತ್ಸವವಾಗಿದೆ. ಇದನ್ನು ಪಗಲ್ ಪಾತು ಮತ್ತು ರಾ ಪಾತು ಎನ್ನುವ ಎರಡು ಹತ್ತು ದಿನಗಳ ಭಾಗಗಳಾಗಿ ವಿಂಗಡಿಸಲಾಗಿದ್ದು ಎಲ್ಲ ಸಂಭ್ರಮ ಹಾಗೂ ಸಡಗರಗಳ ಜೊತೆಯಲ್ಲಿ ಆಚರಿಸಲಾಗುತ್ತದೆ. ಏಕಾದಶಿಯ ದಿನದಂದು ಆಭರಣಗಳಿಂದ ಅಲಂಕೃತನಾಗಿರುವ ಶ್ರೀ ರಂಗನಾಥ ಸ್ವಾಮಿಯ ಮೆರವಣಿಗೆಯನ್ನು ಪರಮಪಾದ ವಾಸಲ್ ನಿಂದ ಮುಂದುವರಿಸಿ ಸಡಗರ ಸಂಭ್ರಮದಿಂದ ಭಾರತದ ಹಾಗೂ ದೇಶವಿದೇಶಗಳ ಲಕ್ಷಗಟ್ಟಲೆ ಜನರು ಸೇರಿರುವ ಸಾವಿರ ಕಂಬಗಳ ತಿರುಮಾಮಣಿ ಮಂಟಪದ ಮೂಲಕ ಒಯ್ಯಲಾಗುತ್ತದೆ. ಈ ಸನ್ನಿವೇಶವು ದೇವಾಲಯದಲ್ಲಿ ನಡೆಸಲಾಗುವ ಎಲ್ಲ ಉತ್ಸವಗಳಲ್ಲಿ ಅತ್ಯಂತ ಮುಖ್ಯವಾದುದಾಗಿದೆ; ಶ್ರೀರಂಗನಾಥ ಸ್ವಾಮಿಯನ್ನು ಮಹಾರಾಜ ಎನ್ನುವ ರೀತಿಯಲ್ಲಿ ಭಾವಿಸಲಾಗುತ್ತದೆ ಹಾಗೂ ಶ್ರೀ ರಂಗರಾಯ ಎಂದು ಹೆಸರಿಸಲಾಗುತ್ತದೆ. ಈ ಭವ್ಯವಾದ ಸಭಾಮಂಟಪದಲ್ಲಿ ಹಾಗೂ ವಿಶೇಷವಾಗಿ ನಿರ್ಮಿಸಿರುವ ಹಾಗೂ ಅಲಂಕರಿಸಿರುವ ಪೆಂಡಾಲಿನಲ್ಲಿ ಶ್ರೀರಂಗನಾಥ ಸ್ವಾಮಿಯ ದಿವ್ಯವಾದ ದರ್ಬಾರು ನಡೆಯುತ್ತದೆ ಹಾಗೂ ದಿನವಿಡೀ ನಳಯಿರ ದಿವ್ಯಪ್ರಬಂಧಂ ಪಠಿಸಲಾಗುತ್ತದೆ ಹಾಗೂ ದೇವರ ಮೂರ್ತಿಯು ರಾತ್ರಿಯ ಸಮಯದಲ್ಲಿ ದೇವಾಲಯಕ್ಕೆ ಹಿಂತಿರುಗುತ್ತದೆ. ಭಕ್ತಜನರು ಬೆಳಗಿನಿಂದ ಮಧ್ಯ ರಾತ್ರಿಯವರೆಗೂ ಸತತವಾಗಿ ಬರುತ್ತಲೇ ಇರುತ್ತಾರೆ. ಭಕ್ತರು ದಿನವಿಡೀ ಉಪವಾಸವಿದ್ದು, ತಂಡತಂಡವಾಗಿ ಭಜನೆಯನ್ನು ಅವಿಶ್ರಾಂತವಾಗಿ ಕೈಗೊಳ್ಳುತ್ತಾರೆ ಹಾಗೂ ತಾಳಕ್ಕೆ ತಕ್ಕಂತೆ ಹಾಡುತ್ತ, ಕುಣಿಯುತ್ತ ದೇವರ ನಾಮವನ್ನು ಕೊಂಡಾಡುತ್ತ ಇಡೀ ರಾತ್ರಿ ಜಾಗರಣೆ ಮಾಡುತ್ತಾರೆ. ನಿಜವಾಗಿಯೂ ಇದು ಅತ್ಯಂತ ದೈವಿಕ ಅನುಭೂತಿಯನ್ನು ನೀಡುವುದು ಹಾಗೂ ಭೂವೈಕುಂಠವೋ ಎನ್ನುವಂತೆ ಭಾಸವಾಗುವುದು.

ವಿರುಪನ್ (ಚಿದಿರೈ ತೇರು)

ತಮಿಳು ಮಾಸ ಪಾಂಗುನಿಯ (ಮಾರ್ಚ್‌-ಏಪ್ರಿಲ್‌) ವೇಳೆಯಲ್ಲಿ ನಡೆಯುವ ಈ ಭವ್ಯ ಉತ್ಸವವು ರೂಢಿಯ ಲೋಪದೋಷಗಳನ್ನು ಶುದ್ಧೀಕರಿಸುವುದು. ವಿಜಯನಗರ ರಾಜವಂಶದ ವಿರೂಪಣ್ಣ ಉದಯರ್‌ ಎನ್ನುವ ರಾಜರು 1383ರಲ್ಲಿ ಚಿದಿರೈ ತೇರಿನ ಉತ್ಸವವನ್ನು ಆರಂಭಿಸಿದರು. 1371ರಲ್ಲಿ ಮುಸ್ಲೀಮರ ದಾಳಿಗಳ ನಂತರ ರಂಗನಾಥ ಸ್ವಾಮಿಯನ್ನು ಗರ್ಭಗುಡಿಗೆ ತರಲಾಯಿತು (ವೈಶಾಖ ಮಾಸದ 17ನೇ ದಿನ). ಆ ಸಮಯದಲ್ಲಿ ದೇವಾಲಯವು ಶಿಥಿಲಾವಸ್ಥೆಗೆ ತಲುಪಿತ್ತು.1377ರಲ್ಲಿ ಮಹಾರಾಜ ವಿರೂಪಣ್ಣ ದೇವಾಲಯದ ಜೀರ್ಣೋದ್ಧಾರಕ್ಕೆ 17,000 ಚಿನ್ನದ ನಾಣ್ಯಗಳನ್ನು ಸಮರ್ಪಿಸಿದರು. ಜೀರ್ಣೋದ್ಧಾರಮಾಡಿದ ನಂತರ 1383ರಲ್ಲಿ ಚಿದಿರೈ ಉತ್ಸವವನ್ನು 60 ವರ್ಷಗಳ ನಂತರ ಪುನಃ ಆರಂಭಿಸಲಾಯಿತು. ದೇವಾಲಯದ ಅಭಿವೃದ್ಧಿಗಾಗಿ ವಿರೂಪಣ್ಣ 52 ಹಳ್ಳಿಗಳನ್ನು ನೀಡಿದರು. 1383ರಲ್ಲಿ ಚಿದಿರೈ ಉತ್ಸವವನ್ನು ಹತ್ತಿರದ ಗ್ರಾಮಗಳ ಜನರು ಸೇರಿ ಸಂಭ್ರಮದಿಂದ ಆಚರಿಸಿದರು. ಈ ಉತ್ಸವದ 8ನೇ ಹಾಗೂ 9ನೇ ದಿನಗಳಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಜನರು ಅತ್ಯಂತ ಸಂಭ್ರಮದಿಂದ ಭಾಗವಹಿಸುತ್ತಾರೆ. ಸುತ್ತಮುತ್ತಲ ಗ್ರಾಮಸ್ಥರು ದನಗಳನ್ನು ಹಾಗೂ ತಮ್ಮ ಹೊಲಗಳಿಂದ ಬೆಳೆಗಳನ್ನು ಕಾಣಿಕೆಯಾಗಿ ನೀಡುವುದು ಸಾಮಾನ್ಯ. ಈ ಉತ್ಸವವು ರೇವತಿ ನಕ್ಷತ್ರಕ್ಕಿಂತ ಎಂಟು ದಿನ ಮೊದಲು ಆರಂಭವಾಗುತ್ತದೆ. ಚಿದಿರೈ ರಥಯಾತ್ರೆಯನ್ನು ರೇವತಿ ನಕ್ಷತ್ರದ ದಿನ ನಡೆಸಲಾಗುತ್ತದೆ.

ಅಂಕುರಾರ್ಪಣ (ಕಾಳುಗಳಿಗೆ ಮೊಳಕೆ ಬರುವಂತೆ ಮಾಡುವುದು)

ಕೆಲವು ಅರ್ಚಕರು ತಾಯಾರ್ ಸನ್ನಿಧಿಗೆ ವಿಶ್ವಕ್ಸೇನ (ಸ್ವಾಮಿಯ ಸೇನೆಯ ಸೇನಾಪತಿ) ಹಾಗೂ ಆಂಜನೇಯ ದೇವರುಗಳ ಮೂರ್ತಿಯನ್ನು ತರುತ್ತಾರೆ. ಅವರು ಬಿಲ್ವ ಪತ್ರೆಯ ಮರದಡಿಯಲ್ಲಿ ಪೂಜೆಯನ್ನು ಮಾಡುತ್ತಾರೆ ಹಾಗೂ ಕೆಲವು ಅರ್ಚಕರು ನದಿಯ ತೀರಕ್ಕೆ ನದಿಯ ಮರಳನ್ನು ತರಲು ಹೋಗುತ್ತಾರೆ, ಹಾಗೂ “ಭೂಸೂಕ್ತ”ವನ್ನು ಪಠಿಸುತ್ತ ಎರಡೂ ತೇವಯುಕ್ತ ಮರಳುಗಳನ್ನು ಮಿಶ್ರಣ ಮಾಡುತ್ತಾರೆ ಮತ್ತು ಮಡಿಕೆಗಳಲ್ಲಿ ಈ ಮರಳನ್ನು ಹಾಕುತ್ತಾರೆ. ಬೀಜಗಳನ್ನು ಮಡಿಕೆಗೆ ಹಾಕಲಾಗುತ್ತದೆ ಹಾಗೂ ನಂತರ ಯಾಗಶಾಲೆಯಲ್ಲಿ ಇರಿಸಲಾಗುತ್ತದೆ. ಕೆಲವು ದಿನಗಳ ಬಳಿಕ ಬೀಜವು ಮೊಳಕೆಯೊಡೆಯುತ್ತದೆ.

ನಗರಶೋಧನೆ (ನಗರ ಪರೀಕ್ಷೆ)

ವಿಶ್ವಕ್ಸೇನ ಮೂರ್ತಿಯನ್ನು ಚಿದಿರೈನ ಎಲ್ಲ ನಾಲ್ಕು ಬೀದಿಗಳಿಗೂ ಒಯ್ಯಲಾಗುತ್ತದೆ. ವಿಶ್ವಕ್ಸೇನ ಮೂರ್ತಿಯು ರಂಗನಾಥ ಸ್ವಾಮಿಯು ಬರುವ ಮೊದಲು ಈ ಬೀದಿಗಳ ಪರೀಕ್ಷೆಯನ್ನು ಮಾಡುತ್ತಾನೆ ಹಾಗೂ ಯಾವುದೇ ಅನಿರೀಕ್ಷಿತ ಘಟನೆ ಸಂಭವಿಸುವುದಿಲ್ಲ ಎನ್ನುವುದನ್ನು ಖಾತ್ರಿಪಡಿಸುವುದಕ್ಕಾಗಿ ಶೋಧನೆ ಕೈಗೊಳ್ಳುತ್ತಾನೆ ಎನ್ನುವ ಪ್ರತೀತಿಯಿದೆ. ಇದನ್ನು ನಗರಶೋಧನೆ ಎನ್ನುತ್ತಾರೆ.

மಮೊದಲ ದಿನ (ಧ್ವಜಾರೋಹಣ)

ಮೊದಲ ದಿನ ಧ್ವಜವನ್ನು (ಕ್ಯಾನ್ವಾಸ್ ಬಟ್ಟೆಯ ಮೇಲೆ ಚಿತ್ರಿಸಿರುವ ಗರುಡ) ಬೆಳಗಿನ ಜಾವ ಚಿದಿರೈನ ಎಲ್ಲ ನಾಲ್ಕು ಬೀದಿಗಳಿಗೂ ತರಲಾಗುತ್ತದೆ. ದೇವಾಲಯದ ಪೂಜೆಯು ಆರಂಭಗೊಳ್ಳುವುದನ್ನು ಸೂಚಿಸಲು ಸ್ವಾಮಿಯ ಸನ್ನಿಧಿಯಲ್ಲಿ ಇದನ್ನು ಆರೋಹಣ ಮಾಡಲಾಗುತ್ತದೆ. ಧ್ವಜಾರೋಹಣದ ನಂತರ ದೇವರನ್ನು ದರ್ಪಣ ಗೃಹಕ್ಕೆ (ಕನ್ನಡಿ ಕೋಣೆ) ತರಲಾಗುತ್ತದೆ (ಉತ್ಸವದ 1ನೇ ಹಾಗೂ 7ನೇ ದಿನ ಮಾತ್ರ ಸಾರ್ವಜನಿಕ ಪೂಜೆಗೆ ಅವಕಾಶ ಇರುತ್ತದೆ). ಸಂಜೆಯ ವೇಳೆ ಸ್ವಾಮಿ ಹಾಗೂ ಎರಡೂ ದೇವಿಯರ ಮೂರ್ತಿಗಳನ್ನು ಚಿದಿರೈ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ. ದೇವರ ಸನ್ನಿಧಿಯಲ್ಲಿ ಪೊಯ್‌ಗೈಆಳ್ವಾರ್‌ ರಚನೆಗಳನ್ನು ಹಾಡಲಾಗುತ್ತದೆ.

ಎರಡನೇ ದಿನ

ಬೆಳಗಿನ ಜಾವ ನಾಂಪೆರುಮಾಳ್(ಶ್ರೀರಾಮ) ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ನಾಲ್ಕು ಚಿತ್ರಬೀದಿಗಳಲ್ಲಿ ಒಯ್ಯಲಾಗುತ್ತದೆ. ಅದೇ ದಿನ ಸಂಜೆ ನಾಲ್ಕು ಚಿತ್ರಬೀದಿಗಳಲ್ಲಿ ನಾಂಪೆರುಮಾಳ್ ಸ್ವಾಮಿಯನ್ನು ಕಲ್ಪವೃಕ್ಷದ ವಾಹನದಲ್ಲಿ ಒಯ್ಯಲಾಗುತ್ತದೆ. ದೇವರ ಸನ್ನಿಧಿಯಲ್ಲಿ ಬೋಧತಆಳ್ವಾರ್ ರಚನೆಗಳನ್ನು ಹಾಡಲಾಗುತ್ತದೆ.

ಮೂರನೇ ದಿನ

ಮೂರನೇ ದಿನ ಬೆಳಿಗ್ಗೆ ದೇವರನ್ನು ಸಿಂಹವಾಹನದಲ್ಲಿ ಹಾಗೂ ಸಂಜೆಯ ಸಮಯದಲ್ಲಿ ಯಾಲಿ (ಕಾಲ್ಪನಿಕ ಪ್ರಾಣಿ) ವಾಹನದಲ್ಲಿ ಒಯ್ಯುತ್ತಾರೆ. ದೇವರ ಸನ್ನಿಧಿಯಲ್ಲಿ ಪೆಯಾಳ್ವಾರ್ ರಚನೆಗಳನ್ನು ಹಾಡಲಾಗುತ್ತದೆ.

ನಾಲ್ಕನೇ ದಿನ

ಬೆಳಿಗ್ಗೆ ನಾಂಪೆರುಮಾಳ್ ಸ್ವಾಮಿಯನ್ನು ದ್ವಿಪ್ರಭಾ ವಾಹನದಲ್ಲಿ ಹಾಗೂ ಸಂಜೆ ಗರುಡವಾಹನದಲ್ಲಿ ಒಯ್ಯಲಾಗುತ್ತದೆ. ದೇವರ ಸನ್ನಿಧಿಯಲ್ಲಿ ತಿರುಮಾಝಿಸೈಆಳ್ವಾರ್ ರಚನೆಗಳನ್ನು ಹಾಡಲಾಗುತ್ತದೆ.

ಐದನೇ ದಿನ

ಬೆಳಿಗ್ಗೆ ನಾಂಪೆರುಮಾಳ್ ಸ್ವಾಮಿಯನ್ನು ಶೇಷವಾಹನದಲ್ಲಿ(ಸರ್ಪವಾಹನ) ಹಾಗೂ ಸಂಜೆ ಹನುಮಂತ ವಾಹನದಲ್ಲಿ ಒಯ್ಯಲಾಗುತ್ತದೆ. ದೇವರ ಸನ್ನಿಧಿಯಲ್ಲಿ ನಾಮಾಳ್ವಾರ್ ರಚನೆಗಳನ್ನು ಹಾಡಲಾಗುತ್ತದೆ.

ಆರನೇ ದಿನ

ಬೆಳಿಗ್ಗೆ ನಾಂಪೆರುಮಾಳ್ ಸ್ವಾಮಿಯನ್ನು ಹಂಸವಾಹನದಲ್ಲಿ ಹಾಗೂ ಸಂಜೆ ದೇವರಿಗೆ ಎಳೆನೀರನ್ನು ನೈವೇದ್ಯ ಮಾಡಿ ಗಜ ವಾಹನದಲ್ಲಿ ಒಯ್ಯಲಾಗುತ್ತದೆ. ದೇವರ ಸನ್ನಿಧಿಯಲ್ಲಿ ನಾಮಾಳ್ವಾರ್ ರಚನೆಗಳನ್ನು ಹಾಡಲಾಗುತ್ತದೆ

ಏಳನೇ ದಿನ

ಬೆಳಗಿನ ವೇಳೆ ಭಕ್ತಾದಿಗಳು ಕನ್ನಡಿ ಕೋಣೆಯಲ್ಲಿ ದೇವರಿಗೆ ಸೇವೆ ಸಲ್ಲಿಸಬಹುದು. ಸಂಜೆ ನಾಂಪೆರುಮಾಳ್ ಸ್ವಾಮಿಯನ್ನು ದೇವಿಯಂದಿರ ಜೊತೆಯಲ್ಲಿ ತಿರುಕೊಟ್ಟಾರಂಗೆ (ಧಾನ್ಯ ಸಂಗ್ರಹಾಲಯ) ಒಯ್ದು ರೂಢಿಯಂತೆ ಭತ್ತವನ್ನು ಪರೀಕ್ಷೆ ಮಾಡಲಾಗುತ್ತದೆ. ನಂತರ ದೇವರ ಮೆರವಣಿಗೆಯನ್ನು ಚಿತ್ರಬೀದಿಗಳಲ್ಲಿ ನಡೆಸಲಾಗುತ್ತದೆ ಹಾಗೂ ತಾಯರ್ ಸನ್ನಿಧಿಗೆ ತಲುಪಿದ ನಂತರ ಅಭಿಷೇಕವನ್ನು ಕೈಗೊಳ್ಳಲಾಗುತ್ತದೆ. ರಾತ್ರಿ ದೇವರ ಮೂರ್ತಿಯು ಕನ್ನಡಿ ಕೋಣೆಗೆ ಹಿಂತಿರುಗುವುದು. ದೇವರ ಸನ್ನಿಧಿಯಲ್ಲಿ ತಿರುಮಾಝಿಸೈಆಳ್ವಾರ್ ರಚನೆಗಳನ್ನು ಹಾಡಲಾಗುತ್ತದೆ.

ಎಂಟನೇ ದಿನ

ಬೆಳಗಿನ ಸಮಯದಲ್ಲಿ ದೇವರನ್ನು ಶ್ವೇತಾಶ್ವವಾಹನದಲ್ಲಿ ಒಯ್ಯಲಾಗುತ್ತದೆ. ಹಾಗೂ ಸಂಜೆ ದೇವರು ಸ್ವರ್ಣಿಮ ಅಶ್ವವಾಹನದಲ್ಲಿ ಸಂಚರಿಸುತ್ತಾರೆ. ಚಿತ್ರರಥಬೀದಿಯ ಹತ್ತಿರ ಬಂದಾಗ ದೇವರನ್ನು ಒಯ್ಯುತ್ತಿರುವ ಅಶ್ವವಾಹನವನ್ನು ಅತ್ಯಂತ ವೇಗದಲ್ಲಿ ಒಯ್ಯುವ ವಿಶಿಷ್ಟ ಘಟನೆಯನ್ನು ವೀಕ್ಷಿಸಬಹುದು. ಶ್ರೀದೇವರ ಸನ್ನಿಧಿಯಲ್ಲಿ ತಿರುಮಾಂಗೈಆಳ್ವಾರ್ ರಚನೆಗಳನ್ನು ಹಾಡಲಾಗುತ್ತದೆ.

ಒಂಬತ್ತನೇ ದಿನ (ರಥಯಾತ್ರೆ)

ಬೆಳಗಿನ ಜಾವದಲ್ಲಿ ನಾಂಪೆರುಮಾಳ್ ಸ್ವಾಮಿಯನ್ನು ಚಿತ್ರ ರಥದಲ್ಲಿ ಸ್ಥಾಪಿಸಿ ನಾಲ್ಕು ಚಿತ್ರರಥಬೀದಿಗಳಲ್ಲಿ ಒಯ್ಯಲಾಗುತ್ತದೆ. ನಂತರ ದೇವರನ್ನು ರೇವತಿ ಮಂಟಪಕ್ಕೆ ಒಯ್ದು ಅಭಿಷೇಕ ಮಾಡಲಾಗುತ್ತದೆ. ದೇವರ ಸನ್ನಿಧಿಯಲ್ಲಿ ತಿರುಮಾಂಗೈಆಳ್ವಾರರ ರಚನೆಗಳನ್ನು ಹಾಡಲಾಗುತ್ತದೆ.

ಹತ್ತನೇ ದಿನ (ಶಬ್ದಾವರಣಂ)

ಬೆಳಿಗ್ಗೆ ಸಂಧಾನು ಮಂಟಪದಲ್ಲಿ ದೇವರಿಗೆ ಅಭಿಷೇಕವನ್ನು ಮಾಡುತ್ತಾರೆ. ಸಂಜೆ ಕೇವಲ ರಾಮಾನುಜರ ರಚನೆಗಳನ್ನು ನಾಮ್‌ಪೆರುಮಾಳ್‌ ದೇವರು ಆಲಿಸುವ ರೀತಿಯಲ್ಲಿ ಅತ್ಯಂತ ಶಾಂತವಾಗಿ ಮೆರವಣಿಗೆ ಮಾಡಲಾಗುತ್ತದೆ (ಇದೇ ಕಾರಣದಿಂದ ಸಂಗೀತ ಸಾಧನಗಳನ್ನು ಬಳಸಲಾಗುವುದಿಲ್ಲ). ರಾಮಾನುಜರ ದೇವಾಲಯಕ್ಕೆ ಹೋಗುವ ನಾಂಪೆರುಮಾಳ್ ಸ್ವಾಮಿಗೆ ದೇವಾಲಯದಲ್ಲಿ ಸ್ವಾಗತಿಸಲಾಗುವುದು ಹಾಗೂ ಶ್ರೀ ರಾಮಾನುಜ ದೇವಾಲಯದಲ್ಲಿ ದೇವರಿಗೆ ಎಳನೀರು ನೈವೇದ್ಯ ಮಾಡುತ್ತಾರೆ. ನಾಮ್‌ಪೆರುಮಾಳ್‌ ಸ್ವಾಮಿಗೆ ಎಳೆನೀರು ನೈವೇದ್ಯ ಮಾಡಿದ ನಂತರ ಇದನ್ನು ರಾಮಾನುಜರಿಗೆ ನೈವೇದ್ಯ ಮಾಡಲಾಗುತ್ತದೆ.

ಹನ್ನೊಂದನೇ ದಿನ

ಬೆಳಿಗ್ಗೆ ಗರುಡ ಮಂಟಪದಲ್ಲಿ ದೇವರಿಗೆ ಅಭಿಷೇಕವನ್ನು ಮಾಡುತ್ತಾರೆ. ಸಂಜೆ ನಾಮ್‌ಪೆರುಮಾಳ್‌ ಅವರ ಮೆರವಣಿಗೆಯನ್ನು ಅಲಂಕೃತಗೊಂಡಿರುವ ಪಲ್ಲಕ್ಕಿಯಲ್ಲಿ ಹೂವುಗಳಿಂದ ಅಲಂಕರಿಸಲಾಗಿರುವ ಚಿತ್ರಬೀದಿಯ ಉದ್ದಕ್ಕೂ ನಡೆಸುತ್ತಾರೆ.

ಈ ಉತ್ಸವವು ದೇವರು ಕೇವಲ ಮನುಷ್ಯರನ್ನಷ್ಟೇ ಅಲ್ಲದೇ ಪ್ರಾಣಿಗಳಿಗೂ ಕೃಪೆ ಮಾಡುತ್ತಾನೆ ಎನ್ನುವುದನ್ನು ನಿರೂಪಿಸುತ್ತದೆ. ಗಜೇಂದ್ರ ಎನ್ನುವ ಆನೆಯು ಸರೋವರದಿಂದ ಕಮಲದ ಹೂವುಗಳನ್ನು ಒಯ್ದು ದೇವರ ಪಾದಗಳಿಗೆ ಅರ್ಪಿಸುತ್ತದೆ ಮತ್ತು ಪ್ರತಿದಿನವೂ ಬಿಡದೇ ಇದನ್ನು ಮಾಡುತ್ತದೆ. ಈ ಸೇವೆಯನ್ನು ಅತ್ಯಂತ ಶ್ರಧ್ಧೆಯಿಂದ ಆನೆಯು ನಡೆಸುತ್ತಿರುತ್ತದೆ. ಆನೆಯು ದೇವರಲ್ಲಿ ಏನನ್ನೂ ಬೇಡದಿರುವ ಈ ಆನೆಯು ದೇವರಿಗೆ ಅತ್ಯಂತ ಪ್ರಿಯ ಭಕ್ತನಾಗಿರುತ್ತದೆ. ಒಂದು ದಿನ ಕಮಲದ ಹೂವುಗಳನ್ನು ಕೊಯ್ಯಲೆಂದು ಆನೆಯು ಸರೋವರದಲ್ಲಿ ಕಾಲಿಟ್ಟಾಗ ಮೊಸಳೆಯೊಂದರ ದಾಳಿಗೆ ತುತ್ತಾಗುತ್ತದೆ. ನೋವನ್ನು ತಡೆಯುವುದಕ್ಕೆ ಸಾಧ್ಯವಾಗದೇ ಇದ್ದರೂ ದೇವರ ಸೇವೆಗೆ ಹೂವನ್ನು ನೀಡಲಾಗುತ್ತಿಲ್ಲವಲ್ಲ ಎಂಬ ಆಲೋಚನೆಯಿಂದ ಕಣ್ಣೀರು ಮಿಡಿಯುತ್ತದೆ. ಅದು ನಿರಂತರವಾಗಿ ತನ್ನಿಂದ ಸೇವೆ ಪಡೆಯುವಂತೆ ದೇವರಲ್ಲಿ ಬೇಡುತ್ತದೆಯೇ ಹೊರತು ನೋವಿನಿಂದ ಬಿಡುಗಡೆಯನ್ನು ಬೇಡುವುದಿಲ್ಲ. ಮಹಾವಿಷ್ಣುವು ಪ್ರತ್ಯಕ್ಷಗೊಂಡು ಮೊಸಳೆಯನ್ನು ಸಾಯಿಸುತ್ತಾನೆ ಹಾಗೂ ಗಜೇಂದ್ರನನ್ನು ಹರಸುತ್ತಾನೆ. ಈ ಘಟನೆಯು ಸಂಭವಿಸಿದ್ದು ಕಾವೇರಿ ತೀರದಲ್ಲಿ ಎನ್ನುವ ಪ್ರತೀತಿ ಇದೆ.
ಈ ಉತ್ಸವವನ್ನು ತಮಿಳು ಮಾಸವಾಗಿರುವ ಚೈತಿರೈನಲ್ಲಿ (ಚೈತ್ರಮಾಸ, ಏಪ್ರಿಲ್ – ಮೇ ತಿಂಗಳು) ದೇವರನ್ನು ಅಲಂಕರಿಸಲು ಬಳಸುವ ಹೂವುಗಳ ಅಶುದ್ಧತೆಯನ್ನು ಸ್ವಚ್ಛಗೊಳಿಸಲು ಆಚರಿಸಲಾಗುತ್ತದೆ.

ಈ ಉತ್ಸವವನ್ನು ಶ್ರೀರಾಮಾವತಾರದ ಸ್ಮೃತಿಗಾಗಿ ಆಚರಿಸಲಾಗುತ್ತದೆ, ಶ್ರೀರಂಗಂನಲ್ಲಿ ಇದರ ಆಚರಣೆಯು ವಿಶಿಷ್ಟವಾಗಿರುತ್ತದೆ. ಒಬ್ಬ ಆಳ್ವಾರ್‌ ಆಗಿರುವ ಮತ್ತು ಶ್ರೀ ರಾಮನ ಭಕ್ತರಾದ ಕುಲಶೇಖರ ಆಳ್ವಾರರು ತನ್ನ ಮಗಳನ್ನು ಶ್ರೀ ರಂಗನಾಥನಿಗೆ ಧಾರೆ ಎರೆಯುತ್ತಾರೆ. ಶ್ರೀ ರಂಗನಾಥ ಹಾಗೂ ಚೇರಕುಲವಲ್ಲಿನಾಚಿಯಾರ್‌ (ಕುಲಶೇಖರ್ ಆಳ್ವಾರರ ಪುತ್ರಿ) ಇಬ್ಬರನ್ನು ಅಕ್ಕಪಕ್ಕಗಳಲ್ಲಿ ಕುಳ್ಳಿರಿಸಿ ಅವರ ಅಭಿಷೇಕವನ್ನು ಮಾಡಲಾಗುತ್ತದೆ.

ಇದನ್ನು ತಮಿಳು ಮಾಸವಾದ ವೈಕಾಸಿ (ಮೇ-ಜೂನ್‌) ನಲ್ಲಿ ಆಚರಿಸಲಾಗುತ್ತದೆ. ವಿಜಯನಗರ ರಾಜವಂಶದ ರಾಜ ಅಣ್ಣಪ್ಪ ಉದಯರ್ ವಸಂತಮಂಟಪವನ್ನು 1444ರಲ್ಲಿ ನಿರ್ಮಿಸಿದರು. ವಸಂತೋತ್ಸವವನ್ನು ನಡೆಸುವುದಕ್ಕಾಗಿ ಮಲ್ಲೀದೇವನ್ ಪುದೂರು ಗ್ರಾಮವನ್ನು ದತ್ತಿನೀಡಲಾಯಿತು. ವಸಂತೋತ್ಸವವು ಹುಣ್ಣಿಮೆಗಿಂತ 8 ದಿನಗಳ ಮೊದಲು ಆರಂಭಗೊಳ್ಳುವುದು. ಹುಣ್ಣಿಮೆ ಹಬ್ಬವು ದೇವರು ಅಶ್ವವಾಹನದಲ್ಲಿ ವಿರಾಜಮಾನನಾಗಿ ಚಿತ್ರಾದ ಬೀದಿಗಳನ್ನು ಸುತ್ತು ಹಾಕಿ ವಸಂತಮಂಟಪಕ್ಕೆ ಬರುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ. ವಸಂತ ಮಂಟಪದಲ್ಲಿ ದೇವರಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಮೊದಲನೇಯ ದಿನ ಹಾಗೂ ಏಳನೇಯದ ದಿನ ಸ್ವಾಮಿಯು ಎರಡೂ ದೇವಿಯರ ಜೊತೆಯಲ್ಲಿ ವಸಂತಮಂಟಪಕ್ಕೆ ಬರುತ್ತಾನೆ. ಉಳಿದೆಲ್ಲ ದಿನಗಳಂದು ಕೇವಲ ಸ್ವಾಮಿಯ ಮೂರ್ತಿಯನ್ನು ಮಾತ್ರ ವಸಂತ ಮಂಟಪಕ್ಕೆ ತರಲಾಗುತ್ತದೆ. ಕಂಬರ್ ಮಂಟಪಕ್ಕೆ ಬರುವ ಎಲ್ಲ ದಿನಗಳಂದು ಸ್ವಾಮಿಯ ಮೂರ್ತಿಯು ಗರ್ಭಗುಡಿಗೆ ಹಿಂತಿರುಗುತ್ತದೆ. ಸ್ವಾಮಿಯ ಸನ್ನಿಧಿಯಲ್ಲಿ ಪ್ರತಿ ದಿನ ಆಳ್ವಾರರ ರಚನೆಗಳನ್ನು ಪಠಿಸಲಾಗುತ್ತದೆ. ದೇವಿ ರಂಗನಾಯಕಿಯ ದೇವಾಲಯದಲ್ಲಿಯೂ ಕೂಡ ವಸಂತೋತ್ಸವವನ್ನು ನಡೆಸಲಾಗುತ್ತದೆ.

2
worship1
4
1st
2nd
3rd
4th
5th
6th
8th
10th