ಶ್ರೀರಂಗಂ ದೇವಸ್ಥಾನಕ್ಕೆ ಸ್ವಾಗತ

Sri Ranganatha Swamy Temple, Srirangam

 • Privacy Policy

ಈ ಗೌಪ್ಯತೆಯ ನಿಯಮವು ಸಂಕ್ಷಿಪ್ತವಾಗಿ ನಿಮ್ಮ ದತ್ತಾಂಶವನ್ನು ಯಾವ ರೀತಿಯಲ್ಲಿ ಸಂಗ್ರಹಿಸಲಾಗುತ್ತದೆ ಹಾಗೂ ಶ್ರೀರಂಗಂನ ರಂಗನಾಥ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯು ಯಾವ ರೀತಿಯಲ್ಲಿ ಅದನ್ನು ಬಳಕೆ ಮಾಡಲಾಗುತ್ತದೆ ಎನ್ನುವುದನ್ನು ವಿವರಿಸುತ್ತದೆ. ದಯಮಾಡಿ ಗೌಪ್ಯತೆಯ ನೀತಿಯನ್ನು ಎಚ್ಚರಿಕೆಯಿಂದ ಓದಬೇಕೆಂದು ನಿಮಗೆ ಸೂಚಿಸುತ್ತಿದ್ದೇವೆ. ಶ್ರೀರಂಗಂನ ರಂಗನಾಥ ಸ್ವಾಮಿ ದೇವಾಲಯವು ಒದಗಿಸಿದ ಸೇವೆಗಳನ್ನು ಪಡೆಯುವ ಮೂಲಕ ನೀವು ನಿಮ್ಮ ಡೇಟಾವನ್ನು ಶ್ರೀರಂಗಂನ ರಂಗನಾಥ ಸ್ವಾಮಿ ದೇವಾಲಯವು ಈ ಗೌಪ್ಯತೆಯ ನೀತಿಯಲ್ಲಿ ತಿಳಿಸಿರುವ ಯಾವುದೇ ರೀತಿಯಲ್ಲಿ ಸಂಗ್ರಹಿಸುವುದಕ್ಕೆ ಹಾಗೂ ಬಳಸುವುದಕ್ಕೆ ಒಪ್ಪಿಗೆ ನೀಡುತ್ತಿದ್ದೀರಿ.

ನೀವು ಈ ರೀತಿ ಮಾಡಬೇಕು ಎಂದು ದೇವಾಲಯದ ಆಡಳಿತ ಮಂಡಳಿಯು ಆಶಿಸುತ್ತದೆ:

 • ನಮ್ಮ ವೆಬ್‌ಸೈಟ್‌‌ಗಳ ಬಳಕೆಯನ್ನು ಆರಾಮವಾಗಿ ಮಾಡಬಹುದೆಂಬ ಭಾವನೆಯಿರುವುದು.
 • ನಮಗೆ ಮಾಹಿತಿ ಒದಗಿಸುವಲ್ಲಿ ಸುರಕ್ಷತೆಯ ಭಾವನೆ ಹೊಂದಿರುವುದು.
 • ಈ ಸೈಟಿನಲ್ಲಿ ಗೌಪ್ಯತೆಯ ಕುರಿತು ನಿಮ್ಮ ಪ್ರಶ್ನೆಗಳು ಅಥವಾ ಆತಂಕಗಳ ಬಗ್ಗೆ ನಮ್ಮನ್ನು ಸಂಪರ್ಕಿಸುವುದು
 • ಈ ಸೈಟ್ ಬಳಕೆ ಮಾಡುವುದನ್ನು ತಿಳಿಯುವುದು
 • ನಿಮ್ಮ ನಿರ್ದಿಷ್ಟ ಡೇಟಾ ಸಂಗ್ರಹಿಸಲು ಸಮ್ಮತಿ ನೀಡಬೇಕು

ನಿಮ್ಮಿಂದ ಯಾವ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಅಥವಾ ಸಂಗ್ರಹಿಸಬಹುದಾಗಿದೆ?

ಇವುಗಳ ಮೂಲಕ ನಿಮ್ಮ ಬ್ರೌಸರ್‌ಗೆ ಕಳುಹಿಸಿರುವ “ಕುಕೀಗಳು” ಎಂದು ಕರೆಯುವ ಕಂಪ್ಯೂರ್ ಐಡೆಂಟಿಫಿಕೇಶನ್ ನಿಂದ ಪಡೆಯುವ ಮಾಹಿತಿಯನ್ನು ಒಳಗೊಂಡಂತೆ ನಮ್ಮ ವೆಬ್‌ ಸರ್ವರ್ ಮೂಲಕ ಪ್ರಮಾಣಿತ ಯೂಸೇಜ್ ಲಾಗ್‌‌ಗಳಲ್ಲಿ ಕೆಳಗಿನವು ಸೇರಿದಂತೆ ಕೆಲವು ಅನಾಮಧೇಯ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪಡೆಯುತ್ತೇವೆ ಹಾಗೂ ಶೇಖರಿಸುತ್ತೇವೆ :

 • ನಿಮ್ಮ ಹಾರ್ಡ್‌ ಡ್ರೈವ್‌ನಲ್ಲಿ ಶೇಖರಣೆಯಾಗಿರುವ ವೆಬ್‌ ಸರ್ವರ್ ಕುಕೀಗಳು
 • ನೀವು ಬಳಕೆ ಮಾಡುವ ಕಂಪ್ಯೂಟರಿಗೆ ನಿಯೋಜಿಸಿರುವ ಒಂದು ಐಪಿ ಅಡ್ರೆಸ್
 • ನೀವು ನಮ್ಮ ಸೇವೆಯನ್ನು ಪ್ರವೇಶಿಸುವ ಡೊಮೈನ್ ಸರ್ವರ್‌
 • ನೀವು ಬಳಕೆ ಮಾಡುತ್ತಿರುವ ಕಂಪ್ಯೂಟರಿನ ವಿಧ
 • ನೀವು ಬಳಕೆ ಮಾಡುತ್ತಿರುವ ವೆಬ್‌ ಸರ್ವರಿನ ವಿಧ

ನಾವು ನಿಮ್ಮ ಕುರಿತು ಕೆಳಗಿನ ವೈಯಕ್ತಿಕ ಗುರುತುಳ್ಳ ಮಾಹಿತಿಯನ್ನು ಸಂಗ್ರಹಿಸಬಹುದು:

 • ಮೊದಲ ಹೆಸರು ಹಾಗೂ ಕೊನೆಯ ಹೆಸರು
 • ಪರ್ಯಾಯ ಇಮೇಲ್ ವಿಳಾಸ
 • ಮೊಬೈಲ್ ಫೋನ್‌ ಸಂಖ್ಯೆ ಹಾಗೂ ಸಂಪರ್ಕ ವಿವರಗಳು
 • ಝಿಪ್/ಅಂಚೆ ಕೋಡ್
 • ಡೆಮೋಗ್ರಾಫಿಕ್ ಪ್ರೊಫೈಲ್ (ನಿಮ್ಮ ವಯಸ್ಸು, ಲಿಂಗ, ವೃತ್ತಿ, ಶಿಕ್ಷಣ, ವಿಳಾಸ, ನಿಮ್ಮ ಮಾಲಿಕತ್ವದ ವಸ್ತುಗಳು ಇತ್ಯಾದಿ);
 • ಆದ್ಯತೆಗಳು ಹಾಗೂ ಆಸಕ್ತಿಗಳು (ಸುದ್ದಿ, ಕ್ರೀಡೆ, ಪ್ರವಾಸ ಮುಂತಾದವುಗಳು)
 • ಹಣಕಾಸಿನ ಮಾಹಿತಿ (ಖಾತೆ ಹಾಗೂ ಕ್ರೆಡಿಟ್ ಕಾರ್ಡ್ ಸಂಖ್ಯೆಯಂಥವುಗಳು) ಮತ್ತು
 • ನಮ್ಮ ವೆಬ್‌ಸೈಟುಗಳಲ್ಲಿ ವೈಶಿಷ್ಟ್ಯಗಳ ಕುರಿತು ಅಭಿಪ್ರಾಯಗಳು.
 • ನೀವು ಭೇಟಿ ಮಾಡುವ/ನೋಡುವ ಪುಟಗಳ ಕುರಿತು ಮಾಹಿತಿ
 • ನಮ್ಮ ಸೈಟಿನಲ್ಲಿ ನೀವು ಕ್ಲಿಕ್ ಮಾಡುವ ಲಿಂಕುಗಳು
 • ನೀವು ಪುಟವನ್ನು ಎಷ್ಟು ಸಲ ವೀಕ್ಷಿಸುತ್ತೀರಿ ಎಂಬುದು. ನೀವು ಯಾವುದೇ ಸಮಯದಲ್ಲಿ ನಿಮ್ಮ ಖಾತೆಯನ್ನು ರದ್ದುಗೊಳಿಸಬಹುದು. ಆದರೆ ನಿಮ್ಮ ಕುರಿತು ಸಂಗ್ರಹಿಸಿರುವ
 • ಮಾಹಿತಿಯು ನಮ್ಮ ಸರ್ವರ್‌ಗಳಲ್ಲಿ ನಿಮ್ಮ ಖಾತೆ ಅಳಿಸಿದ ಅಥವಾ ಮುಕ್ತಾಯಗೊಳಿಸಿದ ನಂತರವೂ ಹಾಗೆಯೇ ಉಳಿಯಬಹುದು.

ನಾವು ಕೆಳಗಿನ ಮಾಹಿತಿಯನ್ನು ಕೂಡ ಸಂಗ್ರಹಿಸಬಹುದು:

 • ನೀವು ಭೇಟಿ ಮಾಡುವ/ನೋಡುವ ಪುಟಗಳ ಕುರಿತು ಮಾಹಿತಿ
 • ನಮ್ಮ ಸೈಟಿನಲ್ಲಿ ನೀವು ಕ್ಲಿಕ್ ಮಾಡುವ ಲಿಂಕುಗಳು
 • ನೀವು ಎಷ್ಟು ಸಲ ಪುಟವನ್ನು ವೀಕ್ಷಿಸುವಿರಿ ಎಂಬ ಮಾಹಿತಿ. ನೀವು ಯಾವುದೇ ಸಮಯದಲ್ಲಿ ನಿಮ್ಮ ಖಾತೆಯನ್ನು ಮುಕ್ತಾಯಗೊಳಿಸಬಹುದು. ಆದರೆ ನಿಮ್ಮ ಕುರಿತು ಸಂಗ್ರಹಿಸಿದ ಮಾಹಿತಿಯು ನಮ್ಮ ಸರ್ವರ್‌ ಆರ್ಕೈವುಗಳಲ್ಲಿ ನೀವು ನಿಮ್ಮ ಖಾತೆ ಅಳಿಸಿದ ಅಥವಾ ಮುಕ್ತಾಯಗೊಳಿಸಿದ ನಂತರವೂ ಹಾಗೆಯೇ ಉಳಿಯಬಹುದು.

ಮಾಹಿತಿಯನ್ನು ಯಾರು ಸಂಗ್ರಹಿಸುತ್ತಾರೆ?

ನಾವು ನಮ್ಮ ಸೈಟಿಗೆ ನೀವು ಭೇಟಿ ನೀಡಿದಾಗ ಅನಾಮಧೇಯಗೊಳಿಸಿದ ಡೇಟಾ ಟ್ರಾಫಿಕ್ ಮಾಹಿತಿಯನ್ನು ಸಂಗ್ರಹಿಸುತ್ತೇವೆ.
ನಾವು ನಿಮ್ಮ ಬಗೆಗಿನ ಗುರುತಿಸಬಲ್ಲ ಮಾಹಿತಿಯನ್ನು ಕೇವಲ ಸ್ವಯಂಪ್ರೇರಿತ ನೋಂದಣಿ ಪ್ರಕ್ರಿಯೆಯ ಭಾಗವಾಗಿ ಮಾತ್ರವೇ ಸಂಗ್ರಹಿಸುತ್ತೇವೆ.
ನಮ್ಮ ಜಾಹೀರಾತುದಾರರು ನಿಮ್ಮ ಬ್ರೌಸರ್‌ಗೆ ಅವರದ್ದೇ ಆದ ನಿಯೋಜಿತ ಕುಕೀಗಳ ಮೂಲಕ ಅನಾಮಧೇಯಗೊಳಿಸಿದ ಡೇಟಾ ಟ್ರಾಫಿಕ್ ಮಾಹಿತಿಯನ್ನು ಸಂಗ್ರಹಿಸಬಹುದು.

ಸೈಟ್‌ ಇತರ ವೆಬ್‌ಸೈಟುಗಳ ಲಿಂಕುಗಳನ್ನು ಹೊಂದಿರುತ್ತದೆ. ನಾವು ನಿಯಂತ್ರಿಸದ, ನಿರ್ವಹಿಸದ ಅಥವಾ ಮಾಲಿಕತ್ವ ಹೊಂದಿರದ ಅಂತಹ ವೆಬ್‌ಸೈಟುಗಳ ಗೌಪ್ಯತೆಯ ರೂಢಿಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ.

ಸೈಟ್‌ ಇತರ ವೆಬ್‌ಸೈಟುಗಳ ಲಿಂಕುಗಳನ್ನು ಹೊಂದಿರುತ್ತದೆ. ನಾವು ನಿಯಂತ್ರಿಸದ, ನಿರ್ವಹಿಸದ ಅಥವಾ ಮಾಲಿಕತ್ವ ಹೊಂದಿರದ ಅಂತಹ ವೆಬ್‌ಸೈಟುಗಳ ಗೌಪ್ಯತೆಯ ರೂಢಿಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ.

ನಾವು ನಿಮಗೆ ಚಾಟ್‌ ರೂಂಗಳು, ಫೋರಂಗಳು, ಇನ್‌ಸ್ಟಂಟ್‌ ಮೆಸೆಂಜರ್ ಹಾಗೂ ಮೆಸೇಜ್‌ ಬೋರ್ಡುಗಳು ಮತ್ತು ಇತರ ಸೇವೆಗಳನ್ನು

ಲಭ್ಯವಾಗಿಸುತ್ತೇವೆ. ಈ ಪ್ರದೇಶಗಳಲ್ಲಿ ಬಹಿರಂಗಪಡಿಸಿರುವ ಯಾವುದೇ ಮಾಹಿತಿಯು ಸಾರ್ವಜನಿಕ ಮಾಹಿತಿ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಇದರ ಬಳಕೆಯ ಮೇಲೆ ನಮಗೆ ನಿಯಂತ್ರಣವಿಲ್ಲ ಮತ್ತು ಯಾರಿಗಾದರೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವ ಸಂದರ್ಭದಲ್ಲಿ ನೀವು ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ?

ನಾವು ಇವುಗಳಿಗಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸುತ್ತೇವೆ:

 • ವೈಯಕ್ತಿಕಗೊಳಿಸಿದ ವೈಶಿಷ್ಟ್ಯಗಳನ್ನು ಒದಗಿಸಲು ನಮಗೆ ನೆರವಾಗುವುದು
 • ನಿಮ್ಮ ಅಗತ್ಯಕ್ಕೆ ತಕ್ಕಂತೆ ನಮ್ಮ ಸೈಟನ್ನು ರೂಪಿಸುವುದು
 • ಅಗತ್ಯವಾದಾಗ ನಿಮ್ಮ ಜೊತೆಯಲ್ಲಿ ಸಂಪರ್ಕ ಸಾಧಿಸುವುದು
 • ನೀವು ವಿನಂತಿಸಿರುವ ಸೇವೆಗಳನ್ನು ಒದಗಿಸುವುದು
 • ಪ್ರಚಲಿತ ಕಾನೂನು ಅಥವಾ ನೀತಿನಿಯಮಗಳಂತೆ ಸಾಮಾಜಿಕ ಐತಿಹಾಸವನ್ನು ರಕ್ಷಿಸುವುದು
 • ನಾವು ಆಂತರಿಕವಾಗಿ ಸಂಪರ್ಕ ಮಾಹಿತಿಯನ್ನು ಇವುಗಳಿಗಾಗಿ ಬಳಸುತ್ತೇವೆ:
 • ಉತ್ಪನ್ನದ ಸುಧಾರಣೆಗಾಗಿ ನಮ್ಮ ಪ್ರಯತ್ನಗಳಿಗೆ ದಿಶೆ ನೀಡಲು
 • ಸಮೀಕ್ಷೆಗೆ ಪ್ರತಿಕ್ರಿಯೆ ನೀಡುವವರಾದ ನಿಮ್ಮನ್ನು ಸಂಪರ್ಕಿಸುವುದು
 • ನಿಮಗೆ ಪ್ರಯೋಜನವಾಗುವ ಮಾಹಿತಿ ಸಾಮಗ್ರಿಗಳನ್ನು ಕಳುಹಿಸುವುದು.
 • ಅನಾಮಧೇಯಗೊಳಿಸಿದ ಡೇಟಾ ಟ್ರಾಫಿಕ್ ಮಾಹಿತಿಯನ್ನು ನಾವು ಸಾಮಾನ್ಯವಾಗಿ ಇವುಗಳಿಗಾಗಿ ಬಳಸುತ್ತೇವೆ:
 • ನಿಮಗೆ ಉತ್ತಮ ಹಾಗೂ ಸೂಕ್ತ ಸೇವೆಯನ್ನು ಒದಗಿಸುವುದಕ್ಕಾಗಿ ನೀವು ಯಾರು ಎನ್ನುವುದನ್ನು ನಮಗೆ ನೆನಪಿಸುವುದು
 • ನಮ್ಮ ವೆಬ್‌ಸೈಟುಗಳನ್ನು ನೀವು ಯಾವ ಉಪಕರಣಗಳಲ್ಲಿ ನೋಡುವಿರಿ ಎಂಬುದನ್ನು ಗುರುತಿಸುವುದು
 • ನಮ್ಮ ಮಾಹಿತಿ ನೀಡುವ ಸಂವಹನಗಳಲ್ಲಿ ನಿಮ್ಮ ಎಂಟ್ರಿಗಳನ್ನು ಟ್ರ್ಯಾಕ್‌ ಮಾಡುವುದು.
 • ನೀವು ಪದೇ ಪದೇ ಅದೇ ಸುದ್ದಿಯನ್ನು ಪಡೆಯುವುದಿಲ್ಲ ಎಂದು ಖಾತ್ರಿಪಡಿಸಿಕೊಳ್ಳುವುದು
 • ನಮ್ಮ ಸರ್ವರಿನ ಸಮಸ್ಯೆಗಳನ್ನು ಪತ್ತೆ ಮಾಡಲು ನೆರವಾಗುವುದು
 • ನಮ್ಮ ವೆಬ್‌ಸೈಟುಗಳನ್ನು ನಿರ್ವಹಿಸುವುದು
 • ನಮ್ಮ ಸೈಟನ್ನು ಜನರು ಹೇಗೆ ಬಳಸುತ್ತಾರೆ ಎನ್ನುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೀವು ನಮ್ಮ ವೆಬ್ ಸೈಟಿನಲ್ಲಿದ್ದ ಅವಧಿಯನ್ನು ಟ್ರ್ಯಾಕ್ ಮಾಡುವುದು.

ನಿಮ್ಮ ಮಾಹಿತಿಯನ್ನು ಯಾರ ಜೊತೆಯಲ್ಲಿ ಹಂಚಿಕೊಳ್ಳಲಾಗುವುದು

ನಿಮ್ಮ ಜೊತೆಯಲ್ಲಿ ವಹಿವಾಟು ಪೂರ್ತಿಗೊಳಿಸುವ ಯಾವುದೇ ಉದ್ದೇಶವನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ನಿಮ್ಮ ಕುರಿತಾದ ಯಾವುದೇ ಹಣಕಾಸು ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಬಾಡಿಗೆ ನೀಡುವುದಿಲ್ಲ, ಮಾರಾಟ ಮಾಡುವುದಿಲ್ಲ ಅಥವಾ ಹಂಚಿಕೊಳ್ಳುವುದಿಲ್ಲ ಮತ್ತು ಕೆಳಗಿನ ಸಂದರ್ಭ ಹೊರತುಪಡಿಸಿ ನಿಮ್ಮನ್ನು ಗುರುತಿಸುವ ಮಾಹಿತಿಯನ್ನು ನಾವು ಮೂರನೇ ಪಕ್ಷಗಳಿಗೆ ಬಹಿರಂಗಪಡಿಸುವುದಿಲ್ಲ: :

 • ನಾವು ನಿಮ್ಮ ಅನುಮತಿಯನ್ನು ಹೊಂದಿರುವಾಗ
 • ನೀವು ವಿನಂತಿಸಿದ ಉತ್ಪನ್ನಗಳು ಅಥವಾ ಸೇವೆಗಳನ್ನು ಒದಗಿಸಲು
 • ಕಾನೂನುಬಾಹಿರ ಹಾಗೂ ಕಾಯ್ದೆವಿರುದ್ಧದ ಚಟುವಟಿಕೆಗಳು, ವಂಚನೆಯ ಸಂದೇಹ, ಯಾವುದೇ ವ್ಯಕ್ತಿಯ ಸುರಕ್ಷತೆ ಅಥವಾ ಭದ್ರತೆಗೆ ಸಂಭಾವ್ಯ ಬೆದರಿಕೆ, ಬಳಕೆಯ ನಿಯಮಗಳ ಉಲ್ಲಂಘನೆಗಳ ತನಿಖೆಗಾಗಿ, ಅವುಗಳನ್ನು ತಡೆಯುವುದಕ್ಕಾಗಿ ಅಥವಾ ಕ್ರಮ ಕೈಗೊಳ್ಳುವುದಕ್ಕಾಗಿ ಅಥವಾ ಕಾನೂನು ಕ್ಲೇಮುಗಳ ಸಂದರ್ಭದಲ್ಲಿ ಸ್ವತಃ ನಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ;
 • ನ್ಯಾಯಾಲಯದ ಆಜ್ಞೆ ಅಥವಾ ಆದೇಶಗಳಿಗೆ, ಕಾನೂನು ಪ್ರಾಧಿಕಾರಗಳಿಂದ ಅಥವಾ ಕಾನೂನು ಜಾರಿ ಸಂಸ್ಥೆಗಳಿಂದ ಅಂತಹ ಬಹಿರಂಗಪಡಿಸುವಿಕೆ ಅಗತ್ಯವಾಗುವ ವಿನಂತಿಗಳು/ಆದೇಶಗಳಿಗೆ ಬದ್ಧರಾಗಿರಬೇಕಾಗಿರುವ ವಿಶೇಷ ಸನ್ನಿವೇಶಗಳ ಸಂದರ್ಭದಲ್ಲಿ.

ಮಾಹಿತಿಯ ಸಂಗ್ರಹ, ಬಳಕೆ ಹಾಗೂ ವಿತರಣೆಗೆ ಸಂಬಂಧಿಸಿ ಯಾವ ಆಯ್ಕೆಗಳು ನಿಮಗೆ ಲಭ್ಯವಿರುತ್ತವೆ?

ವೈಯಕ್ತಿಕವಾಗಿ ಗುರುತಿಸುವ ಮಾಹಿತಿ ನೀಡುವುದು ಸಂಪೂರ್ಣ ಸ್ವಯಂಪ್ರೇರಿತವಾಗಿದೆ. ನಮ್ಮ ಸೈಟುಗಳನ್ನು ಬಳಸುವುದಕ್ಕೆ ನೀವು ನೋಂದಣಿ ಮಾಡಲೇಬೆಕೆಂದೇನೂ ಇಲ್ಲ. ಆದರೆ ನಮ್ಮ ಕೆಲವು ಸೇವೆಗಳನ್ನು ನಾವು ಕೇವಲ ನೋಂದಾಯಿಸಿಕೊಳ್ಳುವ ಭಕ್ತಾದಿಗಳಿಗೆ ಮಾತ್ರವೇ ಒದಗಿಸುತ್ತೇವೆ.

ನೀವು ನಿಮ್ಮ ಆಸಕ್ತಿಗಳನ್ನು ಯಾವುದೇ ಸಮಯದಲ್ಲಿ ಬದಲಾಯಿಸಬಹುದು ಹಾಗೂ ನಮ್ಮ ನ್ಯೂಸ್ ಲೆಟರ್‌/ಮೇಲಿಂಗ್‌‌ ಪಡೆಯುವುದನ್ನು ಕೈಬಿಡಬಹುದು.

ಶ್ರೀರಂಗಂ ನಿಮ್ಮ srirangam.org ಖಾತೆಯ ಬಳಕೆಯ ಭಾಗವಾಗಿ ನಿಮಗೆ ಕೆಲವು ಸೇವಾ ಸಂಬಂಧಿ ಮಾಹಿತಿಯನ್ನು ಕಳುಹಿಸುವ ಹಕ್ಕನ್ನು ಮೀಸಲಿಟ್ಟಿದೆ ಹಾಗೂ ನಿಮಗೆ ಇದರಿಂದ ಹೊರಬರುವ ಆಯ್ಕೆಯು ಇರುವುದಿಲ್ಲ. ನೀವು ಯಾವುದೇ ಸಮಯದಲ್ಲಿ ನಿಮ್ಮ ಮಾಹಿತಿಯನ್ನು ನವೀಕರಿಸಬಹುದು ಮತ್ತು ನಿಮ್ಮ ಖಾತೆಯ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು.

ವಿನಂತಿಯ ಮೇರೆಗೆ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯನ್ನು ನಮ್ಮ ಡೇಟಾಬೇಸ್‌ನಿಂದ ನಾವು ತೆಗೆಯುತ್ತೇವೆ/ನಿರ್ಬಂಧಿಸುತ್ತೇವೆ, ಈ ಮೂಲಕ ನಿಮ್ಮ ನೋಂದಣಿ ರದ್ದುಗೊಳಿಸುತ್ತೇವೆ. ಕೆಳಗಿನ ಸಂಪರ್ಕ ಮಾಹಿತಿಯನ್ನು ನೋಡಿರಿ. ಆದರೆ ನಿಮ್ಮ ಖಾತೆಯನ್ನು ಅಳಿಸಿದ ಅಥವಾ ರದ್ದುಗೊಳಿಸಿದ ನಂತರವೂ ಮಾಹಿತಿಯು ನಮ್ಮ ಸರ್ವರುಗಳ ಆರ್ಕೈವ್‌ಗಳಲ್ಲಿ ಶೇಖರಗೊಂಡೇ ಇರಬಹುದು.

ನಾವು ನಿಮ್ಮ ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯನ್ನು ಯಾವುದೇ ಸಾಮಾನ್ಯ ಉದ್ದೇಶಗಳಿಗಾಗಿ ಬಳಸಲು ಯೋಜಿಸಿದಲ್ಲಿ ನಾವು ಆ ಮಾಹಿತಿಯನ್ನು ಸಂಗ್ರಹಿಸುವ ಸಮಯದಲ್ಲಿ ನಿಮಗೆ ತಿಳಿಸುತ್ತೇವೆ ಮತ್ತು ಅಂತಹ ಉದ್ದೇಶಗಳಿಗೆ ನಿಮ್ಮ ಮಾಹಿತಿ ಬಳಕೆ ಮಾಡುವುದನ್ನು ತ್ಯಜಿಸಲು ನಿಮಗೆ ಅವಕಾಶ ನೀಡುತ್ತೇವೆ.

ನೀವು ಕುಕೀಗಳನ್ನು ಒಪ್ಪಿಕೊಳ್ಳಬಹುದು ಅಥವಾ ನಿರಾಕರಿಸಬಹುದು. ಕಸ್ಟಮೈಸ್ ಮಾಡಬಹುದಾದ ಎಲ್ಲ ಸೈಟುಗಳಿಗೂ ಕೂಡ ನೀವು ಕುಕೀಗಳನ್ನು ಅಂಗೀಕರಿಸುವುದು ಅಗತ್ಯವಿರುತ್ತದೆ. ನಮ್ಮ ಸೇವೆಗಳಲ್ಲಿ ಕೆಲವಕ್ಕೆ ನೋಂದಾಯಿಸಿಕೊಳ್ಳುವುದಕ್ಕಾಗಿ ಕೂಡ ನೀವು ಕುಕೀಗಳನ್ನು ಅಂಗೀಕರಿಸುವುದು ಅತ್ಯಗತ್ಯ. ಕುಕೀಗಳ ಬಗ್ಗೆ ನಿಮ್ಮ ಬ್ರೌಸರ್ ಎಚ್ಚರಿಕೆ ನೀಡುವುದನ್ನು ಹೇಗೆ ನಿಗದಿಪಡಿಸಬೇಕು ಎನ್ನುವ ಕುರಿತು ಮಾಹಿತಿಗಾಗಿ ಅಥವಾ ಕುಕೀಗಳನ್ನು ನಿರಾಕರಿಸುವುದಕ್ಕಾಗಿ http://www.cookiecentral.com/faq/ ಗೆ ಹೋಗಿ.

ಮಾಹಿತಿಯು ನಷ್ಟವಾಗುವುದು, ದುರ್ಬಳಕೆಯಾಗುವುದು ಅಥವಾ ಬದಲಾವಣೆಯಾಗುವುದರಿಂದ ರಕ್ಷಿಸುವುದಕ್ಕೆ ಯಾವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ?

ನಮ್ಮ ನಿಯಂತ್ರಣದಲ್ಲಿರುವ ಮಾಹಿತಿಯು ನಷ್ಟವಾಗುವುದು, ದುರ್ಬಳಕೆಯಾಗುವುದು ಅಥವಾ ಬದಲಾವಣೆಯಾಗುವುದನ್ನು ತಡೆಯುವುದಕ್ಕಾಗಿ ನಾವು ಸೂಕ್ತ ಭೌತಿಕ, ವಿದ್ಯುನ್ಮಾನ ಹಾಗೂ ವ್ಯವಸ್ಥಾಪನಾ ಪ್ರಕ್ರಿಯೆಗಳನ್ನು ಹೊಂದಿದ್ದೇವೆ. ಉದಾಹರಣೆಗೆ ನಿಮ್ಮ ಮಾಹಿತಿಯನ್ನು ನಮ್ಮ ಸರ್ವರ್‌ಗಳಲ್ಲಿ ಕೇವಲ ಅಧಿಕೃತವಾದ ಸಿಬ್ಬಂದಿ ಮಾತ್ರವೇ ಆಕ್ಸೆಸ್‌ ಮಾಡುವುದಕ್ಕೆ ಅವಕಾಶವಿರುತ್ತದೆ ಮತ್ತು ನಿಮ್ಮ ಮಾಹಿತಿಯನ್ನು ಸಂಬಂಧಿಸಿದ ಸಿಬ್ಬಂದಿಯ ಜೊತೆಯಲ್ಲಿ ವಹಿವಾಟು ಪೂರ್ತಿಗೊಳಿಸಲು ಹಾಗೂ ನೀವು ವಿನಂತಿಸಿದ ಸೇವೆಯನ್ನು ಒದಗಿಸುವುದಕ್ಕಾಗಿ ತಿಳಿಯುವುದು ಅಗತ್ಯವಾಗಿರುವಾಗ ಮಾತ್ರವೇ ಹಂಚಿಕೊಳ್ಳಲಾಗುವುದು.

ನಾವು ನಿಮ್ಮ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯ ಗೌಪ್ಯತೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದರೂ ಸಹ, ಇಂಟರ್‌‌ನೆಟ್ ಮೂಲಕ ಮಾಡಿರುವ ಮಾಹಿತಿ ವರ್ಗಾವಣೆಯನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸುವುದು ಸಾಧ್ಯವಿರುವುದಿಲ್ಲ. ಈ ಸೈಟ್ ಬಳಸುವ ಮೂಲಕ ನೀವು ನಿಮ್ಮ ಮಾಹಿತಿಯನ್ನು ರವಾನೆಯಲ್ಲಿನ ದೋಷ ಅಥವಾ ಮೂರನೇ ಪಕ್ಷಗಳ ಅನಧಿಕೃತವಾದ ಕ್ರಮಗಳಿಂದಾಗಿ ಸಂಭವಿಸುವ ಮಾಹಿತಿ ಬಹಿರಂಗಪಡಿಸುವಿಕೆಗೆ ನಾವು ಯಾವುದೇ ಹೊಣೆಗಾರಿಕೆ ಹೊಂದಿರುವುದಿಲ್ಲ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಿ.

ನೀವು ಮಾಹಿತಿಯಲ್ಲಿರುವ ದೋಷಗಳನ್ನು ಹೇಗೆ ಸರಿಪಡಿಸಬಹುದು?

ನಮ್ಮ ಸೈಟುಗಳಿಗೆ ನೀವು ಒದಗಿಸಿರುವ ಯಾವುದೇ ಮಾಹಿತಿಯನ್ನು ಆನ್‌ಲೈನಿನಲ್ಲಿ ಸರಿಪಡಿಸಲು ಅಥವಾ ನವೀಕರಿಸಲು ನಿಮಗೆ ಅನುಮತಿಯಿದೆ. ಆಕ್ಸೆಸ್‌ ವಿವರಗಳು ನಷ್ಟವಾದಲ್ಲಿ ನೀವು ಕೆಳಗಿನ ಯಾವುದೇ ಆಯ್ಕೆಯನ್ನು ಬಳಸಬಹುದು.
srirangam@tnhrce.org ಗೆ ಇಮೇಲ್ ಅನ್ನು ಕಳುಹಿಸುವುದು
ದೂರವಾಣಿ ಸಂಖ್ಯೆ +91 – 431 -2432246ಗೆ ಕರೆ ಮಾಡುವುದು

பின்வரும் முகவரிக்கு ஒரு மின்னஞ்சல் அனுப்பவும் srirangam@tnhrce.org

கீழ்கண்ட தொலைபேசி எண் வாயிலாக தொடர்புகொள்ளவும்: +91 – 431 -2432246

ಸಂಪರ್ಕ ಮಾಹಿತಿ

ನೀವು ನಮ್ಮನ್ನು ಈ ವಿಳಾಸದಲ್ಲಿ ಸಂಪರ್ಕಿಸಬಹುದು:
ಜಂಟಿ ಆಯುಕ್ತರು/ನಿರ್ವಹಣಾ ಅಧಿಕಾರಿ,
ಶ್ರೀ ರಂಗನಾಥ ಸ್ವಾಮಿ ದೇವಾಲಯ
ಶ್ರೀರಂಗಂ, ತಿರುಚಿರಪಲ್ಲಿ – 620006
ತಮಿಳುನಾಡು, ಭಾರತ
ಫೋನ್ : +91 – 431 -2432246
ಫ್ಯಾಕ್ಸ್: +91 – 431 – 2436666
ಇಮೇಲ್ : srirangam@tnhrce.org