ಶ್ರೀರಂಗಂ ದೇವಸ್ಥಾನಕ್ಕೆ ಸ್ವಾಗತ

Sri Ranganatha Swamy Temple, Srirangam

 • Terms and Conditions

ಶ್ರೀರಂಗಂನ ಶ್ರೀ ರಂಗನಾಥಸ್ವಾಮಿ ದೇವಾಲಯದ (ದೇವಾಲಯ)ದ srirangam.org ಬಳಸಿ ಇ-ಕಾಣಿಕೆ/ಆನ್‌ಲೈನ್ ಪೂಜಾ ಕೈಂಕರ್ಯ ಸೇವೆಗಳನ್ನು ನೀವು(ಯೂಸರ್‌ ಅಥವಾ ಬಳಕೆದಾರರು) ಸಲ್ಲಿಸುವ ಮೂಲಕ ಕೆಳಗೆ ಉಲ್ಲೇಖಿಸಿರುವ ನಿಯಮಗಳು ಹಾಗೂ ಷರತ್ತುಗಳನ್ನು ಒಪ್ಪಿಕೊಂಡಿರುತ್ತೀರಿ ಎಂದು ಪರಿಗಣಿಸಲಾಗುತ್ತದೆ. ದೇವಾಲಯವು ಈ ನಿಯಮಗಳು ಹಾಗೂ ಷರತ್ತುಗಳನ್ನು ಯಾವುದೇ ಸಮಯದಲ್ಲಿ ಸೇರಿಸುವ, ಅಳಿಸುವ, ಬದಲಿಸುವ ಅಥವಾ ಪರಿವರ್ತಿಸುವ ತನ್ನ ಹಕ್ಕನ್ನು ಕಾಯ್ದಿರಿಸಿಕೊಳ್ಳುತ್ತದೆ. ಹಾಗಾಗಿ ವೆಬ್ ಸೈಟ್ ಬಳಕೆದಾರರು ಪ್ರತಿ ಸಲ ಕಾಣಿಕೆ/ಆನ್‌ಲೈನ್ ಸೇವಾಕೈಂಕರ್ಯ ಬಳಸುವಾಗಲೂ ದೇವಾಲಯವು ವಿಧಿಸಿರುವ ನಿಯಮಗಳು ಹಾಗೂ ಷರತ್ತುಗಳನ್ನು ಜಾಗರೂಕತೆಯಿಂದ ಓದಬೇಕೆಂದು ಸಲಹೆಮಾಡಲಾಗಿದೆ.

srirangam.org ನಲ್ಲಿ ಪ್ರದರ್ಶಿಸಿರುವ ಎಲ್ಲ ಉತ್ಪನ್ನಗಳು ಹಾಗೂ ಸೇವೆಗಳು ಹಾಗೂ ಮಾಹಿತಿ, ಇ-ಪೂಜೆ,ಇ-ಕಾಣಿಕೆ ಇತ್ಯಾದಿಗಳು “ಸೇವಾ ಕೈಂಕರ್ಯದ ಆಮಂತ್ರಣ”ಗಳಾಗಿರುತ್ತವೆ. ಕಾಣಿಕೆ/ಸೇವೆಯನ್ನು ಸಲ್ಲಿಸಲು ನಿಮ್ಮ ಆರ್ಡರ್ ಅನ್ನು ಸ್ವಾಮಿಯ ”ಸೇವಾಕೈಂಕರ್ಯ” ಎಂದು ಪರಿಗಣಿಸಲಾಗುತ್ತದೆ ಹಾಗೂ ಇದು ಕೆಳಗೆ ಉಲ್ಲೇಖಿಸಿರುವ ನಿಯಮಗಳು ಹಾಗೂ ಷರತ್ತುಗಳಿಗೆ ಒಳಪಟ್ಟಿರುತ್ತದೆ. ದೇವಾಲಯವು (srirangam.org) ನಿಮ್ಮ ಸೇವಾ ಕೈಂಕರ್ಯವನ್ನು ಒಪ್ಪಿಕೊಳ್ಳುವ ಅಥವಾ ಒಪ್ಪಿಕೊಳ್ಳದೇ ಇರುವ ಹಕ್ಕನ್ನು ಹೊಂದಿರುತ್ತದೆ. ನಿಮ್ಮ ಹಾಗೂ
ದೇವಾಲಯದ ನಡುವಿನ ಒಪ್ಪಂದವು ಕೆಳಗಿನ ನಿಯಮಗಳು ಹಾಗೂ ಷರತ್ತುಗಳಿಗೆ ಒಳಪಟ್ಟಿರುವುದು:-

 • ಬಳಕೆದಾರರು ತಮಗೆ ಕನಿಷ್ಠ18 (ಹದಿನೆಂಟು) ವರ್ಷ ವಯಸ್ಸಾಗಿರುವುದಾಗಿಯೂ ತನ್ನ ಪಾಲಕರು ಅಥವಾ ಕಡಿಮೆ ವಯಸ್ಸಿನವರಾಗಿದ್ದಲ್ಲಿ ಕಾನೂನುಬದ್ಧ ಪೋಷಕರ ಸಮ್ಮತಿಯನ್ನು ಹೊಂದಿರುವುದಾಗಿಯೂ ಪ್ರಮಾಣೀಕರಿಸುತ್ತಾರೆ.
 • ಈ ನಿಯಮಗಳು ಹಾಗೂ ಷರತ್ತುಗಳು ಹಿಂದಿನ ಎಲ್ಲ ನಿರೂಪಣೆಗಳು, ಅರ್ಥಮಾಡಿಕೊಳ್ಳುವಿಕೆಗಳು ಅಥವಾ ಒಪ್ಪಂದಗಳನ್ನು ಅಂತ್ಯಗೊಳಿಸುತ್ತವೆ ಹಾಗೂ ಸಲ್ಲಿಸಿರುವ ಯಾವುದೇ ಆರ್ಡರಿನ ಯಾವುದೇ ಇತರ ನಿಯಮಗಳಲ್ಲಿ ಇರುವ ವ್ಯತ್ಯಾಸದ ಹೊರತಾಗಿಯೂ ಇವೇ ಅಂತಿಮವಾಗಿರುತ್ತವೆ. ಕಾಣಿಕೆ/ಆನ್‌ಲೈನ್ ಸೇವೆಗಳನ್ನು ನೀವು ಬಳಸುವ ಮೂಲಕ ಕೆಳಗೆ ಉಲ್ಲೇಖಿಸಿರುವ ನಿಯಮಗಳು ಹಾಗೂ ಷರತ್ತುಗಳಿಗೆ ಬದ್ಧರಾಗಿರುವುದಾಗಿ ನೀವು ಒಪ್ಪಿಕೊಳ್ಳುತ್ತಿದ್ದೀರಿ.
 • ದರಗಳನ್ನು ಬೇರೆ ಕರೆನ್ಸಿಯಲ್ಲಿ ಸೂಚಿಸದಿದ್ದಲ್ಲಿ ಅವು ಭಾರತೀಯ ರೂಪಾಯಿಗಳಲ್ಲಿಯೇ ಇರುತ್ತವೆ./li>
 • ಎಲ್ಲ ಬೆಲೆಗಳು ಹಾಗೂ ದೈವಿಕವಾದ ಸೇವೆಗಳು ಯಾವುದೇ ಪೂರ್ವ ಸೂಚನೆ ಇಲ್ಲದೆಯೇ ದೇವಾಲಯದ ನಿರ್ಣಯದ ಪ್ರಕಾರ ಬದಲಾವಣೆಗೆ ಒಳಪಟ್ಟಿರುತ್ತವೆ.
 • ತಪ್ಪಾದ ದರದಲ್ಲಿ ಪಟ್ಟಿ ಮಾಡಿರುವ ಯಾವುದೇ ಉತ್ಪನ್ನದ ಯಾವುದೇ ಆರ್ಡರ್ ತಿರಸ್ಕರಿಸುವ ಅಥವಾ ರದ್ದುಗೊಳಿಸುವ ಹಕ್ಕನ್ನು ದೇವಾಲಯವು ಕಾಯ್ದಿರಿಸುತ್ತದೆ. ಆರ್ಡರನ್ನು ದೃಢೀಕರಿಸಲಾಗಿದ್ದರೂ ಮತ್ತು/ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯನ್ನು ಮಾಡಲಾಗಿದ್ದರೂ ಈ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ದೇವಾಲಯವು ಹಣವನ್ನು ಪಡೆದಿದ್ದಲ್ಲಿ, ಅದನ್ನು ನಿಮ್ಮ ಕ್ರೆಡಿಟ್‌ ಕಾರ್ಡ್‌ ಖಾತೆಗೆ ಹಿಂತಿರುಗಿಸಲಾಗುವುದು ಹಾಗೂ ನಿಮಗೆ ಇಮೇಲ್ ಮೂಲಕ ಸೂಕ್ತವಾಗಿ ತಿಳಿಸಲಾಗುವುದು.
 • ಕ್ರೆಡಿಟ್ ಕಾರ್ಡ್‌ ವಹಿವಾಟಿನಲ್ಲಿ ನೀವು ನಿಮ್ಮದೇ ಕ್ರೆಡಿಟ್ ಕಾರ್ಡ್ ಬಳಸಬೇಕು. ಕ್ರೆಡಿಟ್ ಕಾರ್ಡ್‌ ವಂಚನೆಗೆ ದೇವಾಲಯವು ಹೊಣೆಗಾರಿಕೆಯನ್ನು ಹೊರುವುದಿಲ್ಲ. ವಂಚನೆಯಿಂದ ಕಾರ್ಡೊಂದನ್ನು ಬಳಸಿದಲ್ಲಿ ಅದರಿಂದ ಉಂಟಾಗುವ ಪರಿಣಾಮಗಳಿಗೆ ಬಳಕೆದಾರರೇ ಹೊಣೆಗಾರರಾಗಿರುತ್ತಾರೆ ಹಾಗೂ ಅವರ ಪ್ರಾಮಾಣಿಕತೆಯನ್ನು ರುಜುವಾತುಪಡಿಸುವುದು ಸಂಪೂರ್ಣವಾಗಿ ಬಳಕೆದಾರರ ಜವಾಬ್ದಾರಿಯಾಗಿರುತ್ತದೆ.
 • ಒಮ್ಮೆ ಸೈಟಿನಲ್ಲಿ ಹಣಪಾವತಿಸಿದ ನಂತರ ಆರ್ಡರುಗಳನ್ನು ರದ್ದುಗೊಳಿಸುವ ಕುರಿತು ಯಾವುದೇ ವಿನಂತಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
 • ಒಂದು ವೇಳೆ ಬಳಕೆದಾರರ ತಪ್ಪಿನಿಂದಾಗಿ ರವಾನೆ ಸಂಭವಿಸಿದೇ ಇದ್ದಲ್ಲಿ (ಅಂದರೆ ತಪ್ಪು ಹೆಸರು ಅಥವಾ ವಿಳಾಸದಿಂದ) ಪುನಃ ರವಾನಿಸುವುದಕ್ಕೆ ದೇವಾಲಯವು ಭರಿಸುವ ಯಾವುದೇ ಹೆಚ್ಚುವರಿ ವೆಚ್ಚವನ್ನು ಬೇಡಿಕೆ ಸಲ್ಲಿಸುತ್ತಿರುವ ಬಳಕೆದಾರರಿಂದಲೇ ಪಡೆಯಲಾಗುವುದು.
 • ನೆರೆಹಾವಳಿ, ಬೆಂಕಿ, ಯುದ್ಧಗಳು. ಪೃಕೃತಿ ವಿಕೋಪ ಅಥವಾ ದೇವಾಲಯದ ನಿಯಂತ್ರಣದಲ್ಲಿರದ ಯಾವುದೇ ಕಾರಣದಿಂದ ಕಾಣಿಕೆ/ಸೇವೆ ಸಲ್ಲಿಸುವಿಕೆಯಲ್ಲಿ ಯಾವುದೇ ವಿಳಂಬ/ ರವಾನೆಯಿಲ್ಲದಿರುವಿಕೆ ಸಂಭವಿಸಿದಲ್ಲಿ ದೇವಾಲಯವು ಇದಕ್ಕೆ ಯಾವುದೇ ಹೊಣೆಗಾರಿಕೆ ಹೊಂದಿರುವುದಿಲ್ಲ.
 • ದೇವಾಲಯವು, ಅದರ ಸೇವಾ ಪೂರೈಕೆದಾರರು, ಸಲಹೆಗಾರರು ಹಾಗೂ ಗುತ್ತಿಗೆ ಕಂಪನಿಗಳು ಒದಗಿಸುವ ಸೇವೆಗಳನ್ನು ಕಾನೂನುಬದ್ಧ ಉದ್ದೇಶಗಳಿಗೆ ಮಾತ್ರವೇ ಬಳಸಲು ಬಳಕೆದಾರರು ಒಪ್ಪಿಕೊಳ್ಳುತ್ತಾರೆ.
 • ಪ್ರಮಾಣೀಕೃತ ಹಾಗೂ ನೈಜ ಮಾಹಿತಿಯನ್ನು ನೀಡಲು ಸೈಟ್ ಬಳಕೆದಾರರು ಒಪ್ಪಿಕೊಳ್ಳುತ್ತಾರೆ. ದೇವಾಲಯವು ಸೈಟಿನ ಬಳಕೆದಾರರು ನೀಡಿರುವ ಯಾವುದೇ ಮಾಹಿತಿ ಅಥವಾ ಇತರ ವಿವರಗಳನ್ನು ಯಾವುದೇ ಸಮಯದಲ್ಲಿ ದೃಢಪಡಿಸಿಕೊಳ್ಳುವ ಹಾಗೂ ಮಾನ್ಯತೆ ಪರೀಕ್ಷಿಸುವ ಹಕ್ಕನ್ನು ಕಾಯ್ದಿರಿಸಿರುತ್ತದೆ. ದೃಢೀಕರಿಸಿದ ಸಂದರ್ಭದಲ್ಲಿ ಅಂತಹ ಬಳಕೆದಾರ ವಿವರಗಳು ಸತ್ಯಯುತವಾಗಿಲ್ಲ (ಸಂಪೂರ್ಣವಾಗಿ ಅಥವಾ ಭಾಗಶಃ) ಎಂದು ಪತ್ತೆಯಾದಲ್ಲಿ, ದೇವಾಲಯವು ನೋಂದಣಿಯನ್ನು ತನ್ನದೇ ನಿರ್ಣಯದಂತೆ ತಿರಸ್ಕರಿಸುವ ಮತ್ತು ಅಂಥ ಬಳಕೆದಾರರು Srirangam.org ನಲ್ಲಿ ಇ-ಪೂಜೆ, ಇ-ಡೊನೇಶನ್‌ ಮತ್ತು/ಅಥವಾ ಇತರ ಆನ್‌ಲೈನ್‌ ಸೇವೆ, ಸೌಲಭ್ಯ ಬಳಸುವುದನ್ನು ಯಾವುದೇ ಪೂರ್ವಸೂಚನೆಯನ್ನೂ ಈ ಕುರಿತು ನೀಡದೇ ತಡೆಹಿಡಿಯುವ ಹಕ್ಕನ್ನು ಹೊಂದಿರುತ್ತದೆ.
 • ಈ ಸೈಟಿನಲ್ಲಿ ನೀಡಲಾದ ಸೇವೆಗಳ ಬಳಕೆಯಿಂದ ಬಳಕೆದಾರರಿಗೆ ಉಂಟಾಗಿರುವ ಯಾವುದೇ ಹಾನಿಗಳಿಗೆ ದೇವಾಲಯವು ಹೊಣೆಗಾರನಾಗಿರುವುದಿಲ್ಲ. ಇದರಲ್ಲಿ ವಿಳಂಬ, ರವಾನೆಯಿಲ್ಲದಿರುವುದು, ತಪ್ಪಿರುವ ರವಾನೆಗಳು ಅಥವಾ ಸೇವಾ ಪೂರೈಕೆದಾರರ ಯಾವುದೇ ಕ್ರಮ/ಕೈಬಿಡುವಿಕೆಯಿಂದ ಉಂಟಾದ ಸೇವಾ ಅಡೆತಡೆಗಳ ಕಾರಣ ಸಂಭವಿಸಿರುವ ಯಾವುದೇ ಆದಾಯ ಹಾನಿ ಒಳಗೊಂಡಿರುತ್ತದೆಯಾದರೂ ಅವುಗಳಿಗಷ್ಟೇ ಸೀಮಿತವಾಗಿರುವುದಿಲ್ಲ. ಈ ಹೊಣೆಗಾರಿಕೆಯ ಹಕ್ಕುನಿರಾಕರಣೆಯು (ಡಿಸ್‌ಕ್ಲೇಮರ್) ಕಾರ್ಯನಿರ್ವಹಣೆಯ ವೈಫಲ್ಯ, ದೋಷ, ಕೈಬಿಡುವಿಕೆ, ಅಡೆತಡೆ, ಅಳಿಸುವಿಕೆ, ತಪ್ಪು, ವಿಳಂಬ ಅಥವಾ ವರ್ಗಾವಣೆ, ಕಂಪ್ಯೂಟರ್ ವೈರಸ್‌, ಸಂವಹನ ವೈಫಲ್ಯ, ಕಳುವು ಅಥವಾ ನಾಶ ಅಥವಾ ಅನಧಿಕೃತ ಪ್ರವೇಶ, ದಾಖಲೆಯ ಬಳಕೆ ಅಥವಾ ಬದಲಾವಣೆಗೆ ಸಂಬಂಧಿಸಿದ ಯಾವುದೇ ಹಾನಿಗಳು ಅಥವಾ ಅಪಾಯಕ್ಕೂ ಅನ್ವಯಿಸುತ್ತದೆ, ಇದು ಒಪ್ಪಂದದ ಉಲ್ಲಂಘನೆ, ದೌರ್ಜನ್ಯಕಾರಿ ನಡವಳಿಕೆ, ನಿರ್ಲಕ್ಷ್ಯ ಅಥವಾ ಬೇರೆ ಯಾವುದಾದರೂ ಕಾರಣದಿಂದಾಗಿ ಸಂಭವಿಸಿರುವ ಸಂದರ್ಭಗಳು ಕೂಡ ಇರಬಹುದು.
 • Srirangam.org, ಇ-ಪೂಜೆ, ಇ-ಡೊನೇಶನ್‌/ಆನ್‌ಲೈನ್‌ ಮೂಲಕ ಸಲ್ಲಿಸುವ ಸೇವೆಯಲ್ಲಿ ಯಾವುದೇ ಸೇವೆಗಳ ಬಳಕೆಯ ಬಗ್ಗೆ ಸಂಪೂರ್ಣವಾಗಿ ಸ್ವತಃ ಬಳಕೆದಾರನದ್ದೇ ಹೊಣೆಗಾರರಾಗಿರುವುದಾಗಿ ಬಳಕೆದಾರರು ಸುವ್ಯಕ್ತವಾಗಿ ಒಪ್ಪಿಕೊಳ್ಳುತ್ತಾರೆ. Srirangam.org, ಇ-ಪೂಜೆ, ಇ-ಡೊನೇಶನ್‌ ಸೇವೆಗಳು “ಹೇಗಿವೆಯೋ ಹಾಗೆ” ಎನ್ನುವಂತೆ ಲಭ್ಯವಿದ್ದು ಯಾವುದೇ ರೀತಿಯ ವಾರೆಂಟಿಗಳನ್ನು ಅವು ಸುವ್ಯಕ್ತವಾಗಿಯಾಗಲಿ ಅಥವಾ ಅವ್ಯಕ್ತವಾಗಿಯಾಗಲಿ ಹೊಂದಿರುವುದಿಲ್ಲ. ದೇವಾಲಯದ ಸೇವಾ ಪೂರೈಕೆದಾರರು, ಉದ್ಯೋಗಿಗಳು, ಏಜೆಂಟರು, ಸಲಹೆಗಾರರು, ಗುತ್ತಿಗೆ ಕಂಪನಿಗಳು ಯಾವುದೇ ರೀತಿಯ ಸುವ್ಯಕ್ತ ಅಥವಾ ಅವ್ಯಕ್ತ ವಾರೆಂಟಿಗಳನ್ನು ತಾವು ನೀಡುತ್ತಿರುವ ಸೇವೆಗಾಗಿ ಅಥವಾ ಸೇವೆಗಳ ಬಳಕೆಯ ಫಲಿತಾಂಶಗಳ ಕುರಿತು ಅಥವಾ ಅದರ ನಿಖರತೆ, ವಿಶ್ವಸನೀಯತೆ ಅಥವಾ ಯಾವುದೇ ಮಾಹಿತಿ, ಸೇವೆಯ ವಿಷಯಗಳ ಕುರಿತಾಗಲಿ ಅಥವಾ ಸೇವೆಯಿಂದ ಪಡೆಯುವ ವಸ್ತುವಿನ ವಾಣಿಜ್ಯಿಕ ಉಪಯಕ್ತತೆಯ ಕುರಿತಾಗಲಿ ನೀಡುವುದಿಲ್ಲ. ದೇವಾಲಯವು ಮಾಹಿತಿಯ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಪ್ರತಿಪಾದನೆಯನ್ನು ಮಾಡುವುದಿಲ್ಲ ಅಥವಾ ಖಾತರಿ ನೀಡುವುದಿಲ್ಲ; ಹಾಗಿದ್ದರೂ ದೇವಾಲಯದ ಸದ್ಯದ ರೂಢಿಯು ಅಂತಹ ಗೌಪ್ಯತೆಯನ್ನು ಕಾಯ್ದುಕೊಳ್ಳಲು ತರ್ಕಬದ್ಧ ಪ್ರಯತ್ನಗಳನ್ನು ಮಾಡುವ ಕುರಿತಾಗಿದೆ
 • ಈ ಒಪ್ಪಂದವನ್ನು ಭಾರತದ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ರೂಪಿಸಲಾಗಿರುತ್ತದೆ. ಈ ಒಪ್ಪಂದದಿಂದ ಉಂಟಾಗುವ ಯಾವುದೇ ಮೊಕದ್ದಮೆಗಳ ಸಂದರ್ಭದಲ್ಲಿ ತಿರುಚ್ಚಿಯ ನ್ಯಾಯಾಲಯವು ಅನನ್ಯವಾದ ನ್ಯಾಯವ್ಯಾಪ್ತಿಯನ್ನು ಹೊಂದಿರುತ್ತದೆ.